Sunday, September 23 , 2018 4:19 AM











ತುಳುನಾಡಿನ ಹೆಮ್ಮೆಯ ಕಲಾಭಂಡಾರ ಅನ್ವಿಷಾ ವಾಮಂಜೂರು..



999

ರಂಜಿತ್ ಮಡಂತ್ಯಾರು

ಮಂಗಳೂರು : ಪ್ರತಿಭೆ ಎಂಬುದು ಪರಿಮಳವಿದ್ದ ಹಾಗೆ. ಮುಚ್ಚಿಟ್ಟರೂ ಅದು ತನ್ನ ಇರವನ್ನು ತೋರಿಸುತ್ತದೆ. ಹಾಗೆಯೇ ಪರಿಶ್ರಮ, ಸಾಧನೆಯಿಲ್ಲದೇ ಮನುಷ್ಯ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ಯಾವುದೇ ರಂಗದಲ್ಲಿ ಹೆಸರು ಪಡೆಯಬೇಕಾದರೂ ಮನುಷ್ಯ ಆ ರಂಗದಲ್ಲಿ ಆಳವಾದ ಜ್ಞಾನ ಮತ್ತು ಆಸಕ್ತಿಯನ್ನು ಹೊಂದಿರಬೇಕು. ಆದರೆ ಇದನ್ನೇಲ್ಲಾ ಈ ಬಾಲೆ ಮಾತ್ರ, ತನ್ನ ಸಣ್ಣ ವಯಸ್ಸಿನಲ್ಲಿ ಅದ್ಬುತವಾದ ಸಾಧನೆಯನ್ನು ಮಾಡುವ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಹೌದು ಈಕೆ ತನ್ನ ಸಣ್ಣ ವಯಸ್ಸಿನಲ್ಲಿ ಪಟ್ಟ ಪರಿಶ್ರಮದ ಫಲವಾಗಿ ಇದೀಗ ಸಾಧನೆಯತ್ತ ಸಾಗುತ್ತಿದ್ದಾಳೆ.

ಅಂದ ಹಾಗೇ ಈಕೆ ಮೂಲತಃ ಮಂಗಳೂರಿನ ವಾಮಂಜೂರು ನಿವಾಸಿ ಅನಿಲ್ ಕುಮಾರ್ ಮತ್ತು ಅನುಷಾ ದಂಪತಿಗಳ ಏಕೈಕ ಮುದ್ದಿನ ಪುತ್ರಿ ಅನ್ವಿಷಾ ವಾಮಂಜೂರು. ಕರಾವಳಿಯ ಹೆಸರನ್ನು ರಾಜ್ಯ, ರಾಷ್ಟ ಮಟ್ಟದಲ್ಲಿ ಪರಿಚಯ ಮಾಡಲು ಹೊರಟಿರುವ ಅದ್ಭುತ ಬಹುಮುಖ ಪ್ರತಿಭೆ ಈ ಬಾಲೆ ಅನ್ವಿಷಾ. ಹೌದು ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಇರಬಹುದು ಆದರೆ ಆ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕರೆ ಮಾತ್ರ ತನ್ನ ಪ್ರತಿಭೆಯನ್ನು ಹೊರತರಲು ಸಾಧ್ಯ. ಇಲ್ಲಿಯೂ ಅನ್ವಿಷಾಳ ಆ ಪ್ರತಿಭೆಯನ್ನು ಹೊರತರಲು ಹೆತ್ತವರ ಪರಿಶ್ರಮ ಬಹಳ ಮುಖ್ಯವಾಗಿದೆ, ಅನ್ವಿಷಾನ ಸಾಧನೆಗೆ ಆಕೆಯ ಪೋಷಕರು ಪಟ್ಟ ಪರಿಶ್ರಮ, ಇದೀಗ ಆಕೆಗೆ ದೊರೆಯಿತ್ತಿರುವ ಪ್ರಶಂಸೆ, ಗೌರವ, ಸನ್ಮಾನಗಳ ಮೂಲಕ ಫಲ ನೀಡುತ್ತಿದೆ ಎಂದರೆ ತಪ್ಪಾಗಲಾರದು. ಅನ್ವಿಷಾ ಬಹಳ ಸಣ್ಣ ವಯಸ್ಸಿನಲ್ಲಿಯೇ ತನ್ನೋಳಗಿನ ಪ್ರತಿಭೆಯನ್ನು ಹೊರತರಲು ಪ್ರಯತ್ನ ಪಟ್ಟು, ಇದೀಗ ತನ್ನ ಪ್ರತಿಭೆಯ ಕಂಪನ್ನು ಪ್ರೇಕ್ಷಕರ ಮುಂದೆ ತಂದು ಪ್ರಶಂಗೆ ಪಾತ್ರರಾಗುತ್ತಿರುವುದು ಆಕೆಯ ಪೋಷಕರಿಗೆ ಮಾತ್ರವಲ್ಲದೇ ಪ್ರೇಕ್ಷಕರಲ್ಲು ಬಹಳಷ್ಟು ಉತ್ಸಾಹವನ್ನು ಉಂಟು ಮಾಡಿದೆ.

ಅನ್ವಿಷಾ ಮಂಗಳೂರಿನ ಮೂಡುಶೆಡ್ಡೆ ಶುಭೋದಯ ವಿದ್ಯಾಲಯದಲ್ಲಿ 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತನ್ನ ಪ್ರತಿಭೆಯ ಜೊತೆಗೆ ತನ್ನ ವಿದ್ಯಾಭ್ಯಾಸದಲ್ಲಿಯೂ ಸಣ್ಣ ವಯಸ್ಸಿನಿಂದಲೂ ಬಹಳಷ್ಟು ಉತ್ತಮ ಫಲಿತಾಂಶವನ್ನು ತನ್ನದಾಗಿಸಿಕೊಂಡವಳು. ಈ ನಡುವೆ ತನ್ನಲ್ಲಿರುವ ಬಹುಮುಖ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ನೃತ್ಯ, ಯಕ್ಷಗಾನ, ಭರತನಾಟ್ಯ, ಸಿನಿಮಾ ಡ್ಯಾನ್ಸ್, ಯೋಗ, ರಂಗೋಲಿ, ಕೀ ಬೋಡರ್್ಗಳನ್ನು ಅಭ್ಯಾಸ ಮಾಡುತ್ತ ಸುಮಾರು 150ಕ್ಕೂ ಹೆಚ್ಚು ಸ್ಪಧರ್ೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಅನ್ವಿಷಾ, ಮಂಗಳೂರು ವೀರ ನಾರಾಯಣ ದೇವಸ್ಥಾನದಲ್ಲಿ ನಡೆದ ಶ್ರೀಕೃಷ್ಣ ವೇಷ ಸ್ಪಧರ್ೆಯಲ್ಲಿ 2 ವರ್ಷ ಪ್ರಥಮ ಸ್ಥಾನ ಪಡೆದು, ಚಿತ್ರಕಲೆ ಹಾಗೂ ಸಂಗೀತ ಸ್ಪಧರ್ೆಯಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.


ಶಕ್ತಿನಗರದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಚಿತ್ರಕಲಾ ಸ್ಪಧರ್ೆಯಲ್ಲಿ ಪ್ರಥಮ, ಬಾಲ ಪ್ರತಿಭೋತ್ಸವ ಅಂತರ್ ಜಿಲ್ಲಾ ಮಟ್ಟದ ಛದ್ಮವೇಷ ಸ್ಪಧರ್ೆಯಲ್ಲಿ ತೃತೀಯ ಸ್ಥಾನ, ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆದ ಕೃಷ್ಣ ವೇಷ ಸ್ಪಧರ್ೆಯಲ್ಲಿ ಪ್ರಥಮ, ಛದ್ಮವೇಷ ಸ್ಪಧರ್ೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾಳೆ. ಕುಡುಪು ಜಗನ್ನಾಥ ಮಂದಿರದಲ್ಲಿ ನಡೆದ ಕೃಷ್ಣ ವೇಷ ಸ್ಪಧರ್ೆಯಲ್ಲಿ ಪ್ರಥಮ, ಅತ್ತಾವರ ಉಮಾಮಹೇಶ್ವರ ಕ್ಷೇತ್ರದಲ್ಲಿ ನಡೆದ ರಂಗೋಲಿ ಸ್ಪಧರ್ೆ ಮತ್ತು ಭಕ್ತಿಗೀತೆ ಸ್ಪಧರ್ೆಯಲ್ಲಿ ಪ್ರಥಮ, ಮೂಡುಶೆಡ್ಡೆ ಶುಭೋದಯ ವಿದ್ಯಾಲಯದಲ್ಲಿ ನಡೆದ ಭಾಷಣ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ, ಹಿಂದೂ ಸೇವಾ ಸಮಾಜ ಶ್ರೀರಾಮ ಭಜನಾ ಮಂದಿರ ವಾಮಂಜೂರು ವತಿಯಿಂದ ನಡೆದ ಭಾವಗೀತೆ ಸ್ಪಧರ್ೆಯಲ್ಲಿ ಪ್ರಥಮ, ಸಿದ್ಧಿ ವಿನಾಯಕ ಪ್ರತಿಷ್ಠಾನದ ವತಿಯಿಂದ ಗಣೇಶೋತ್ಸವದ ಅಂಗವಾಗಿ ನಡೆದ ಚಿತ್ರಕಲೆಯಲ್ಲಿ ಪ್ರಥಮ, ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಮಕ್ಕಳ ಶ್ರೀಕೃಷ್ಣ ವೇಷ ಸ್ಪಧರ್ೆಯಲ್ಲಿ ಪ್ರಥಮ, ಶ್ರೀಕೃಷ್ಣ ಸಮರ್ಪಣಾ ಸಾಂಸ್ಕೃತಿಕ ಮಹೋತ್ಸವ ಸಮಿತಿ ತೊಕ್ಕೊಟ್ಟು ಇದರ ವತಿಯಿಂದ ನಡೆದ ಕೃಷ್ಣವೇಷದಲ್ಲಿ ಪ್ರಥಮ ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಫಾರಂ ಮಾಲ್ನಲ್ಲಿ ನಡೆದ ಮಂಗಳೂರು ಸೂಪರ್ ಕೀಟ್ಸ್ ಪ್ರಶಸ್ತಿಯನ್ನು ಪಡೆದಿದ್ದಾಳೆ. ಅತ್ತಾವರ ಶ್ರೀ ಕ್ಷೇತ್ರ ಚಕ್ರಪಾಣಿಯಲ್ಲಿ ನಡೆದ ಭಕ್ತಿ ಗೀತೆ, ಜಾನಪದ ನೃತ್ಯದಲ್ಲಿ ಪ್ರಥಮ, ರಂಗೋಲಿಯಲ್ಲಿ ದ್ವಿತೀಯ ಸ್ಥಾನ, ಹೀರಾ ಅಂತರಾಷ್ಟ್ರೀಯ ಶಾಲೆಯಲ್ಲಿ ನಡೆದ ಛದ್ಮವೇಷದಲ್ಲಿ ಪ್ರಥಮ, ಶ್ರೀಕೃಷ್ಣ ಸಂಘ ಇಸ್ಕಾನ್ ವತಿಯಿಂದ ಮಂಗಳೂರಿನಲ್ಲಿ ನಡೆದ ಚಿತ್ರಕಲೆ ಮತ್ತು ಕೃಷ್ಣವೇಷ ಸ್ಪಧರ್ೆಯಲ್ಲಿ ದ್ವೀತಿಯ, ನಮೋದಯದ ವತಿಯಿಂದ ನಡೆದ ಸಾಮಾನ್ಯ ಜ್ಞಾನ ಸ್ಪಧರ್ೆಯಲ್ಲಿ ಪ್ರಥಮ, ಅಂತರಾಷ್ಟ್ರೀಯ ಚಿಂತನದ ವತಿಯಿಂದ ನಡೆದ ಚಿತ್ರಕಲಾ ಸ್ಪಧರ್ೆಯಲ್ಲಿ ದ್ವೀತಿಯ, ಮತ್ತು ಇದೀಗ ಕರವಾಳಿಯ ಪ್ರಸಿದ್ಧ ಚಾನೆಲ್ವೊಂದರಲ್ಲಿ ನಡೆಯುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾಳೆ. ಹೀಗೆ ಆಟೋಟ ಸ್ಪಧರ್ೆ ಸೇರಿದಂತೆ ಅನೇಕ ಸ್ಪಧರ್ೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಇದೇ ರೀತಿಯಲ್ಲಿ ತನ್ನ ಬಹುಮುಖ ಪ್ರತಿಭೆಯ ಮೂಲಕ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪಸರಿಸಲಿ ಎಂದು ಶುಭ ಹಾರೈಸೋಣ.

error: Content is protected !!