Sunday, September 23 , 2018 11:41 PMದಲಿತನ ಮನೆಯಲ್ಲಿ ಹೊರಗಿನ ಮೃಷ್ಟಾನ್ನ ಭೋಜನ ಸವಿದ ಬಿಜೆಪಿ ಸಚಿವ!144

ಲಕ್ನೋ : ದಲಿತ ವ್ಯಕ್ತಿಯ ಮನೆಗೆ ಭೇಟಿ ನೀಡಿ ಅಲ್ಲಿನ ಮನೆಯವರೊಂದಿಗೆ ಮನೆಯೂಟ ಸ್ವೀಕರಿಸುವ ಕಾರ್ಯಕ್ರಮ ಹಾಕಿಕೊಂಡಿರುವ ಉ.ಪ್ರದೇಶ ಸಚಿವ, ಬಿಜೆಪಿ ನಾಯಕ ಸುರೇಶ್‌ ರಾಣಾ ಅವರು ದಲಿತನ ಮನೆ ಅಡುಗೆಯ ಬದಲು ಕೇಟರರ್‌ಗಳಿಂದ ತರಿಸಿಕೊಂಡ ಮೃಷ್ಟಾನ್ನ ಭೋಜನವನ್ನು ಸ್ವೀಕರಿಸಿ ವಿವಾದಕ್ಕೆ ಕಾರಣರಾಗಿದ್ದಾರೆ.  ದಲಿತನ ಮನೆಯಲ್ಲಿ ರಾಣಾ ಸವಿದಿರುವ ಮೃಷ್ಟಾನ್ನ ಭೋಜನದಲ್ಲಿ ಮೂರು ಬಗೆಯ ಪನೀರ್‌ ಪಲ್ಯ, ಪುಲಾವ್‌, ಗುಲಾಬ್‌ ಜಾಮೂನ್‌ ಮತ್ತು ಮಿನರಲ್‌ ವಾಟರ್‌ ಇತ್ತೆನ್ನುವುದು ವಿಶೇಷ. ಸಚಿವ ರಾಣಾ ಮೃಷ್ಟಾನ್ನ ಭೋಜನ ಸವಿದಿರುವ ಮನೆಯ ಮಾಲಕ ರಜನೀಶ್‌ ಕುಮಾರ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಸಚಿವರು ನಮ್ಮ ಮನೆಗೆ ಊಟಕ್ಕೆ ಬರುತ್ತಾರೆ ಎಂಬ ಬಗ್ಗೆ ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ಅವರೆಲ್ಲ ದೀಢೀರನೆ ಬಂದರು. ಹಾಗಾಗಿ ನಾವು ಬೇರೆ ಉಪಾಯವೇ ಇಲ್ಲದೆ ಹೊರಗಿನಿಂದ ಆಹಾರ, ನೀರು, ಕಟ್ಲೆರಿ ಇತ್ಯಾದಿಗಳನ್ನು ತರಿಸಿಕೊಂಡೆವು’ ಎಂದು ಹೇಳಿದರು.

 

error: Content is protected !!