Sunday, September 23 , 2018 12:21 AMಕಾಂಗ್ರೆಸ್ ಸರಕಾರ ಪೂರ್ಣ ಬಹುಮತ ಪಡೆದು ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ : ಪುದುಚೇರಿ ಮುಖ್ಯಮಂತ್ರಿ102

ಮಂಗಳೂರು : ಪಾರದರ್ಶಕತೆ, ಜನಪರ ನಿಲುವಿನೊಂದಿಗೆ ಐದು ವರ್ಷಗಳ ಕಾಲ ಶುದ್ಧ ಹಸ್ತದ ಆಡಳಿತ ನೀಡಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪೂರ್ಣ ಬಹುಮತ ಪಡೆದು ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಗೆ ಸುಳ್ಯ ಕ್ಷೇತ್ರಕ್ಕೆ ಆಗಮಿಸಿದ್ದ ಅವರು, ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಮಾತನಾಡಿದರು. ಎಲ್ಲ ವರ್ಗದ ಹಿತಕ್ಕಾಗಿ ಮಾದರಿ ಯೋಜನೆಗಳನ್ನು ತಂದಿರುವ ಸಿದ್ದರಾಮಯ್ಯ ಸರಕಾರವು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ರೈತ ವಿರೋಧಿ ನೀತಿ ಅನುಸರಿಸಿದರೆ, ಸಿದ್ದರಾಮಯ್ಯ ಸರಕಾರ ರೈತ ಪರ ಯೋಜನೆಗಳನ್ನು ಪ್ರಕಟಿಸಿ, ಅವರ ಹಿತ ಕಾಪಾಡಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಉನ್ನತ ಸ್ಥಾನದಲ್ಲಿದೆ. ಕೇಂದ್ರ ಸರಕಾರ ಉದ್ಯೋಗ ಕಸಿದುಕೊಂಡರೆ, ರಾಜ್ಯ ಸರಕಾರ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ ಎಂದು ತಿಳಿಸಿದರು.

error: Content is protected !!