Thursday, August 16 , 2018 7:47 PM











ಕದ್ರಿ ಪಾರ್ಕಿನ ಪುಣಾಣಿ ಮಕ್ಕಳ ರೈಲು, ಲೋಬೋ ಬಿಟ್ಟಿದ್ದೇಲ್ಲಾ ರೈಲು.!? : ರೂಪಾ ಡಿ ಬಂಗೇರ ಆರೋಪ



488

ಮಂಗಳೂರು : ನಗರದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್ ಲೋಬೋ ಅವರು ತಮ್ಮ ಸಾಧನೆಯ ಕುರಿತು ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಕದ್ರಿ ಪಾರ್ಕಿನಲ್ಲಿರುವ ಪುಣಾಣಿ ಮಕ್ಕಳ ರೈಲಿನ ಕುರಿತು ಇದು ನನ್ನ ಸಾಧನೆ ಎಂದು ಬರೆದಿದ್ದಾರೆ. ಆದರೆ ಅವರು ಬಿಟ್ಟಿದ್ದು ರೈಲು ಎಂದು ಪ್ರತಿಪಕ್ಷದ ನಾಯಕಿ ರೂಪಾ ಡಿ ಬಂಗೇರ ಅವರು ಹೇಳಿದ್ದಾರೆ. ಅವರು ನಗರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪುಣಾಣಿ ಮಕ್ಕಳ ರೈಲನ್ನು ಕದ್ರಿ ಪಾರ್ಕಿನಲ್ಲಿ ಒಡಿಸಲಾಗದ ಜೆ.ಆರ್ ಲೋಬೋ ಅವರು ಮಕ್ಕಳಿಗೆ ವಂಚಿಸಿದ್ದರೂ ಪುಟಾಣಿ ರೈಲಿನ ಬಗ್ಗೆ ತಮ್ಮ ಪುಸ್ತಕದಲ್ಲಿ ಸಾಧನೆ ಎಂದು ಬರೆದುಕೊಂಡಿದ್ದಾರೆ. ಕೆಲವು ಅನುದಾನಗಳು ಕೇಂದ್ರದ್ದು ಆಗಿದ್ದರೂ ಮತ್ತು ಸ್ಮಾರ್ಟ್ ಸಿಟಿ ಯೋಜನೆಯದ್ದು, ಇವರ ಪಾತ್ರ ಏನೂ ಇಲ್ಲದಿದ್ದರೂ ಅದನ್ನು ಕೂಡ ನಮೂದಿಸಿದ್ದಾರೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ನವೀನಚಂದ್ರ, ದಿವಾಕರ್, ಬಿಜೆಪಿ ಮುಖಂಡ ರವಿಶಂಕರ್ ಮಿಜಾರ್, ಮಾಜಿ ಮನಪಾ ಸದಸ್ಯ ಭಾಸ್ಕರಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!