Sunday, September 23 , 2018 11:40 PM











ಜೆ.ಆರ್ ಲೋಬೋ ಅವರ ಸಾಧನೆಯ ಹಾದಿಯಲಿ ಪುಸ್ತಕಕ್ಕೆ ಪ್ರತಿಯಾಗಿ ಬಿಜೆಪಿ ಮತ್ತೊಂದು ಪುಸ್ತಕ ಬಿಡುಗಡೆ



198

ಮಂಗಳೂರು : ನಗರದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್ ಲೋಬೋ ಅವರ ಸಾಧನೆಯ ಹಾದಿಯಲಿ ಪುಸ್ತಕಕ್ಕೆ ಪ್ರತಿಯಾಗಿ ಬಿಜೆಪಿ ಮತ್ತೊಂದು ಪುಸ್ತಕವನ್ನು ಬಿಡುಗಡೆಗೊಳಿಸಿದೆ. ನಗರ ದಕ್ಷಿಣ  ವಿಧಾನ ಸಭಾ  ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ಪುಸ್ತಕ ಬಿಡುಗಡೆಗೊಳಿಸಿದರು. ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕಿ ರೂಪಾ ಡಿ ಬಂಗೇರ ಅವರು ಶಾಸಕ ಜೆ ಆರ್ ಲೋಬೋ ಅವರು ಚುನಾವಣೆಯ ಸಂದರ್ಭದಲ್ಲಿ ಹೊರಗೆ ತಂದಿರುವ ಸಾಧನೆಯ ಹಾದಿಯಲಿ ಪುಸ್ತಕದಲ್ಲಿ ಸುಳ್ಳಿನ ಕಂತೆಗಳು ತುಂಬಿವೆ ಎಂದರು. ಆ ಪುಸ್ತಕದಲ್ಲಿ ಶಾಸಕರು ನಮೂದಿಸಿರುವ ಅಭಿವೃದ್ಧಿ ಕಾರ್ಯಗಳು ವಾಸ್ತವಕ್ಕಿಂತ ಸಾಕಷ್ಟು ದೂರ ಇದೆ. ಆದರೆ ಶಾಸಕರು ಇದನ್ನು ಮುಚ್ಚಿಟ್ಟು ಪುಸ್ತಕದಲ್ಲಿ ಅದನ್ನು ನಮೂದಿಸಿದ್ದಾರೆ. ಇದರಿಂದ ಜನರಿಗೆ ತಾವು ತುಂಬಾ ಅಭಿವೃದ್ಧಿ ಮಾಡಿದ್ದೇವೆ ಎಂದು ಭ್ರಮೆ ಮೂಡಿಸಿದ್ದಾರೆ ಎಂದರು. ವಾಹನಗಳ ದಟ್ಟಣೆ, ತ್ಯಾಜ್ಯ ಸಂಗ್ರಹಣೆ, ಕುಡಿಯುವ ನೀರಿನ ಸೋರಿಕೆ, ಒಳಚರಂಡಿ ವ್ಯವಸ್ಥೆ ಬಗ್ಗೆ ಏನೂ ಮಾಡದ ಲೋಬೋ ಅವರು ತಮ್ಮ ಪುಸ್ತಕದಲ್ಲಿ ಅದನ್ನು ಸಾಧನೆ ಎಂದು ಬಿಂಬಿಸಿದ್ದಾರೆ. ಹಲವು ಅನುದಾನಗಳು ಎರಡೆರಡು ಬಾರಿ ಎಂಟ್ರಿ ಆಗಿರುವುದು ಇವರ ಪುಸ್ತಕದಲ್ಲಿ ಎದ್ದು ಕಾಣುತ್ತೀವೆ ಎಂದು ರೂಪಾ ಡಿ ಬಂಗೇರ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ನವೀನಚಂದ್ರ, ದಿವಾಕರ್, ಬಿಜೆಪಿ ಮುಖಂಡ ರವಿಶಂಕರ್ ಮಿಜಾರ್, ಮಾಜಿ ಮನಪಾ ಸದಸ್ಯ ಭಾಸ್ಕರಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!