Sunday, September 23 , 2018 3:01 AM











ಪೊಲೀಸ್ ಅಧಿಕಾರಿ ಪುತ್ರ ಅಂಕಿತ್ ರಾಣೆ ಆತ್ಮಹತ್ಯೆಗೆ ತಿರುವು!



980

ಮಂಗಳೂರು: ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯ ಎಸ್‍ಐ ಪದ್ಮಯ್ಯ ರಾಣೆಯವರ ಮಗ ಅಂಕಿತ್ ರಾಣೆ (28) ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಲಭಿಸಿದೆ.

ಅಂಕಿತ್ ರಾಣೆ  5 ವರ್ಷಗಳಿಂದ ಕೆಲಸ ಮಾಡುತ್ತಿದ್ದ Vivin pinto & co. ಲೆಕ್ಕಪರಿಶೋಧನೆ ಸಂಸ್ಥೆಯ ಸಹೋದ್ಯೋಗಿಗಳೇ ಆತ್ಮಹತ್ಯೆಗೆ ಪ್ರೇರೇಪಣೆ ಎಂದು ಮನೆಯವರು ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂಲತಃ ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡು ನಿವಾಸಿಯಾಗಿದ್ದ ಅಂಕಿತ್ ರಾಣೆ ಬಲ್ಮಠದ ಲೆಕ್ಕಪರಿಶೋಧನೆ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಪರಿಶೋಧಕರಾಗಿದ್ದರು. ಜೂ.25ರಂದು ಕಚೇರಿಯ ಸ್ಟೋರ್ ರೂಮ್‍ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಬಗ್ಗೆ ಪೊಲೀಸರು ಅಂಕಿತ್ ರಾಣೆಯ ಆತ್ಮಹತ್ಯೆ ಪ್ರಕರಣಕ್ಕೆ ನಿಖರವಾದ ಕಾರಣ ತಿಳಿಯಲು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಹುಡುಕುತ್ತಿದ್ದಾರೆ. ಈ ನಡುವೆ ಮೃತನ ಹೆತ್ತವರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಮೂರು ಮಂದಿ ಸಹೋದ್ಯೋಗಿಗಳ ಹೆಸರು ಉಲ್ಲೇಖಿಸಲಾಗಿದೆ.

ಆತ್ಮಹತ್ಯೆಗೆ‌ ಸುಮಾರು ಎರಡು ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಕಛೇರಿಯಲ್ಲಿ ಜಗಳವಾಗಿದ್ದು, ಈ ಬಗ್ಗೆ ಮೇಲ್ವಿಚಾರಕರೊಬ್ಬರಿಗೆ ಅಂಕಿತ್ ರಾಣೆ ವಿರುದ್ಧ ದೂರು ನೀಡಿದ್ದು, ಅವರುಗಳ ಛೇಂಬರ್ ಕೂಡ ಬದಲಿಸಲಾಗಿತ್ತು. ಅಲ್ಲದೇ ಜೀವ ಬೆದರಿಕೆ‌ ಕರೆಗಳು ಬಂದಿದೆ ಎನ್ನಲಾಗಿದೆ.

ಆದರೆ ಇದರಿಂದ ಅಂಕಿತ್ ರಾಣೆ ನೊಂದಿದ್ದ. ಇದರಿಂದ ಬೆದರಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಹೆತ್ತವರ ಆರೋಪ.

error: Content is protected !!