Thursday, August 16 , 2018 7:47 PMಸೈನಿಕರನ್ನು ಗೂಂಡಾ ಎಂದಿದ್ದ ಕಾಂಗ್ರೆಸ್‌ಗೆ ಓಟು ಹಾಕ್ತೀರಾ? : ಮೋದಿ149

ಕಲಬುರಗಿ : ನೆಹರು ಅವರು ಕರ್ನಾಟಕದ ವೀರಪುತ್ರ ಫೀಲ್ಡ್‌ ಫಾರ್ಷಲ್ ಕಾರಿಯಪ್ಪ ಅವರನ್ನು ಗೂಂಡಾ ಎಂದು ಕರೆದಿದ್ದರು, ಅಂತಹ ಪಕ್ಷದವರಿಗೆ ನೀವು ಓಟು ಹಾಕುತ್ತೀರಾ? ಎಂದು ಮೋದಿ ಪ್ರಶ್ನಿಸಿದರು. ಕಲಬುರಗಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ನೆಹರು ಸೇರಿದಂತೆ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಈ ವರೆಗೂ ಸೈನಿಕರಿಗೆ ಗೌರವ ಸಲ್ಲಿಸಿಯೇ ಇಲ್ಲ ಎಂದರು. ಕಲ್ಬುರ್ಗಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ವಿಶೇಷ ಸಂಬಂಧವಿದೆ. ನಿಜಾಮರು ಸ್ವತಂತ್ರ ಭಾರತದಲ್ಲಿ ವಿಲೀನಗೊಲ್ಲಳು ನಿರಾಕರಿಸಿದ್ದರು, ಆದರೆ ಪಟೇಲರು ಅವರನ್ನು ಮಣಿಸಿ ಭಾರತದಲ್ಲಿ ಸೇರಿಸಿಕೊಂಡರು.ಅಂಥಾ ಪಟೇಲರನ್ನು ಕೂಡಾ ಕಾಂಗ್ರೆಸ್ ನೆನೆಸಿಕೊಳ್ಳುವ ಕೆಲಸ ಮಾಡಲಿಲ್ಲ ಅಂತಹವರಿಗೆ ಮತ ಹಾಕುತ್ತೀರಾ ಎಂದರು.

error: Content is protected !!