Tuesday, May 22 , 2018 1:34 PM











ಪ್ರಾಮಾಣಿಕತೆ ಮೇರೆದ ಆಟೋರಿಕ್ಷಾ ಚಾಲಕ : ಸಾರ್ವಜನಿಕರಿಂದ ಭಾರೀ ಪ್ರಶಂಸೆ



110

ಮಂಗಳೂರು : ನಗರದ ರಿಕ್ಷಾ ಚಾಲಕರೊಬ್ಬರ ಪ್ರಾಮಾಣಿಕತೆ, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಹೌದು ಕಳೆದ ಅನೇಕ ಸಮಯದಿಂದ ನಗರದಲ್ಲಿ ರಿಕ್ಷಾ ಚಾಲಕರಾಗಿ ವೃತ್ತಿ ಜೀವನ ಸಾಗಿಸುತ್ತಿರುವ ಆಯಂಡ್ರ್ಯೂ ಸಿಪ್ರಿಯನ್ ಡಿ’ಸೋಜಾ ಎಂಬವರ ಆಟೋ ರಿಕ್ಷಾದಲ್ಲಿ ಪ್ರಯಾಣಿಕರೋರ್ವರು ಬೆಲೆಬಾಳುವ ಮೊಬೈಲ್ ಫೋನ್‌ವೊಂದನ್ನು ಮರೆತು ಬಿಟ್ಟು ಹೋಗಿದ್ದರು. ರಿಕ್ಷಾದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಆ ಬೆಲೆಬಾಳುವ ಮೊಬೈಲ್‌ನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬಳಿಕ ಬಂದರು ಠಾಣೆಯ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಬಿ.ಸಿ. ಅವರು ವಾರೀಸುದಾರರನ್ನು ಕರೆಸಿ ಚಾಲಕ ಆಯಂಡ್ರ್ಯೂ ಸಿಪ್ರಿಯನ್ ಅವರ ಮೂಲಕವೇ ಮೊಬೈಲನ್ನು ಹಸ್ತಾಂತರಿಸಿ ಆಟೋ ಚಾಲಕನ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೂಡ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

error: Content is protected !!