Sunday, September 23 , 2018 12:09 AM











ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಚುನಾವಣಾ ಪ್ರಚಾರ : ಉತ್ತಮ ಸ್ಪಂದನೆ



114

ಮಂಗಳೂರು: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಪರ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಉತ್ತಮ ಜನಬೆಂಬಲದ ಜೊತೆಗೆ ಉತ್ತಮ ಸ್ಪಂದನೆ ಜನರಿಂದ ದೊರೆಯುತ್ತಿದೆ ಎಂದು ಶ್ರೀಕರ ಪ್ರಭು ಅವರು ಹೇಳಿದರು. ಕ್ಷೇತ್ರದಾದ್ಯಂತ ವಿವಿಧೆಡೆ ಯುವಕರು ಸ್ವಯಂ ಪ್ರೇರಿತರಾಗಿ ಶ್ರೀಕರ ಪ್ರಭು ಅವರನ್ನು ಬೆಂಬಲಿಸಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಮಾತ್ರವಲ್ಲದೇ ಈ ಹಿಂದೆ ಶ್ರೀಕರ ಪ್ರಭು ಅವರು ನಗರದ ವಿವಿಧ ಕಡೆಗಳಲ್ಲಿ ರೋಡ್ ಶೋ ನಡೆಸಿ ಮತದಾರರ ಗಮನ ಸೆಳೆದಿದ್ದರು. ಮಂಗಳೂರಿನ ಉರ್ವ ಮಾರುಕಟ್ಟೆ, ಉರ್ವಾಸ್ಟೋರ್ಸ್, ಕೊಟ್ಟಾರ ಮೊದಲಾದೆಡೆ ಪ್ರಚಾರ ನಡೆಸಿದ ಶ್ರೀಕರ ಪ್ರಭು ಅವರು ತಮ್ಮ ಗೆಲುವಿಗಾಗಿ ಶ್ರಮಿಸುವಂತೆ ಮನವಿ ಮಾಡಿದರು ಹಾಗೂ ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಗಲಭೆ ರಹಿತ, ಶಾಂತಿ-ನೆಮ್ಮದಿ ನೆಲೆಸುವಂತೆ ಮಾಡಲು ತಮ್ಮನ್ನು ಬೆಂಬಲಿಸುವಂತೆ ಮನವಿ ಮತದಾರರಿಗೆ ಮನವಿ ಮಾಡಿದ್ದರು.

error: Content is protected !!