Sunday, September 23 , 2018 11:09 PM











ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೇಯಾ ಭಾರೀ ಅವ್ಯವಹಾರ.?, ನನಗೆ ಏನು.. ಗೊತ್ತಿಲ್ಲ ಎಂದ ಅಧೀಕ್ಷಕಿ ಕೊನೆಗೂ ಹೇಳಿದ್ದೇನು ಗೋತ್ತಾ.?



2302

Posted By: Ranjith Madanthyar

ಮಂಗಳೂರು : ಜಿಲ್ಲೆಯಲ್ಲಿನ ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರಿಂದ ಅನೇಕ ಸರಕಾರಿ ಅಧಿಕಾರಿಗಳು ಲಂಚ ಪಡೆಯುತ್ತಿರುವುದು, ಲಂಚಕ್ಕೆ ಬೇಡಿಕೆ ಇಡುವುದು ಹಾಗೂ ಇಲಾಖೆಗಳಲ್ಲಿ ಅವ್ಯವಹಾರಗಳನ್ನು ನಡೆಸಿ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ ಆ ಎಲ್ಲಾ ಪ್ರಕರಣಗಳಿಗಿಂತ ಈ ಪ್ರಕರಣ ಬಹಳ ವಿಭಿನ್ನವಾಗಿದೆ. ಹೌದು ಸಾಮಾನ್ಯವಾಗಿ ಸರಕಾರಿ ಕಛೇರಿಗಳಲ್ಲಿ ಅವ್ಯವಹಾರಗಳು ನಡೆದಾಗ ಸಾಮಾಜಿಕ ಕಾರ್ಯಕರ್ತರು, ಆರ್‌ಟಿಐ ಕಾರ್ಯಕರ್ತರು ಅಥವಾ ಸಾರ್ವಜನಿಕರು ದೂರುಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ಒಂದೇ ಇಲಾಖೆಯಲ್ಲಿ ದುಡಿಯುತ್ತಿರುವ ಪಕ್ಕದ ಸಿಬ್ಬಂದಿಯೇ ತನ್ನ ಸಹದ್ಯೋಗಿಗಳ ವಿರುದ್ಧ ದೂರು ನೀಡಿರುವುದು ಇದೀಗ ಬೆಳಕಿಗೆ ಬಂದಿದೆ.

ಕಮೀಷನ್ ವಿಚಾರಕ್ಕೆ ಪರಸ್ಪರ ಅಧಿಕಾರಿಗಳೇ ವಿರೋಧಿಗಳಾದರೇ.?

ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಅನೇಕ ಅನುಮಾನಗಳು ಹುಟ್ಟಿಕೊಂಡಿದೆ. ಕೆಲದಿನಗಳ ಹಿಂದೆ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಮಾಜಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಕುರಿತು ದೂರು ನೀಡಿದ ವ್ಯಕ್ತಿ ಅದೇ ಇಲಾಖೆಗೆ ಸೇರಿದ ಒಬ್ಬ ಸಿಬ್ಬಂದಿಯಾಗಿದ್ದರು. ಅವರು ದೂರು ನೀಡಲು ಕಾರಣವಾದರೂ ಏನು ಎಂದು ಹುಡುಕುತ್ತ ಹೋದಾಗ.. ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಮೀಷನ್ ದಂಧೆಯ ಕೆಲ ವಿಚಾರಗಳು ಹೊರ ಬಿದ್ದಿದೆ. ಮೂಲಗಳ ಪ್ರಕಾರ ಕಮೀಷನ್ ವಿಚಾರಕ್ಕೆ ಸಂಬಂಧಿಸಿ ಉಂಟಾದ ಕಚ್ಚಾಟ, ಸುಮಾರು ೫-೬ ವರ್ಷಗಳಿಂದ ಪರಸ್ಪರ ಅಧಿಕಾರಿ-ಸಿಬ್ಬಂದಿಗಳನ್ನೇ ವಿರೋಧಿಗಳನ್ನಾಗಿ ಮಾಡಿತ್ತು. ಸಿಬ್ಬಂದಿಗಳ-ಅಧಿಕಾರಿಯ ಮಧ್ಯೆ ಉಂಟಾದ ಈ ಕಚ್ಚಾಟ ಎರಡು ರೀತಿಯಲ್ಲಿ ದ್ವೇಷ ಸಾಧಿಸಲು ಮುಂದಾಗಿದೆ. ಒಬ್ಬ ಸಿಬ್ಬಂದಿಯ ವಿರುದ್ಧ ಕೀರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಾದರೇ. ಮತ್ತೊಂದು, ಅಧಿಕಾರಿ ಹಾಗೂ ಸಿಬ್ಬಂದಿಗಳ ಗುಂಪಿನ ವಿರುದ್ಧ ಅವ್ಯವಹಾರ ನಡೆದಿರುವ ದೂರು ನೀಡಿ ಸಂಕಷ್ಟಕ್ಕೆ ಸಿಲುಕಿಸುವಷ್ಟು ಮಟ್ಟಕ್ಕೆ ಬೆಳೆದುನಿಂತಿದೆ.

ಎಸಿಬಿ ಮೆಟ್ಟಿಲು ಏರಿದ ಪ್ರಕರಣದ ಹಿಂದೆ, ಕಾಣದ ಕೈಗಳ ಕೈವಾಡ.!

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-೧೯೮೮ ರಡಿಯಲ್ಲಿ ದಾಖಲಾದ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ೨೦೧೧-೧೨ ಮತ್ತು ೨೦೧೨-೧೩ನೇ ಸಾಲಿನಲ್ಲಿ ಸರ್ಜಿಕಲ್ ಗ್ಲೌಸ್‌ಗಳ ಖರೀದಿಯಲ್ಲಿ ೧೦,೮೬,೭೮೦ ರೂ. ಮತ್ತು ಲಿನನ್ ಬಟ್ಟೆ ಖರೀದಿಯಲ್ಲಿ ೪೫,೫೦೦ ರೂ. ಹಾಗೂ ಬೆಡ್ಡಿಂಗ್ ಸಾಮಗ್ರಿ ಖರೀದಿಯಲ್ಲಿ ೧೦,೦೦೦ ರೂ. ಸೇರಿ ಒಟ್ಟು ೧೧,೪೨,೨೮೦ ರೂ. ಗಿಂತಲೂ ಮೇಲ್ಪಟ್ಟ ಅವ್ಯವಹಾರ ನಡೆದಿರುವ ಬಗ್ಗೆ ದೂರು ಬಂದಿರುರುವ ಹಿನ್ನೆಲೆಯಲ್ಲಿ ನಿವೃತ್ತ ವೈದ್ಯಾಧಿಕಾರಿ ಡಾ. ಸರೋಜಾ ಮತ್ತು ಪ್ರಥಮ ದರ್ಜೆ ಸಹಾಯಕರಾದ ಬಿ.ಜಿ. ಯಶೋಧಾ ಮತ್ತು ಕೆ.ಬಿ. ಸುಮಾ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಈ ಪ್ರಕರಣದಲ್ಲಿ ಕೆಲ ಕಾಣದ ಕೈಗಳ ಕೈವಾಡ ಇದೆ ಎನ್ನುತ್ತೇ ಕೆಲ ಮೂಲಗಳು. ಅವ್ಯವಹಾರ ನಡೆದಿದೆ ಎಂದು ದೂರು ನೀಡಿದ ವ್ಯಕ್ತಿ ಕೆಲ ದಾಖಲೆಗಳನ್ನು ಎಸಿಬಿ ಅಧಿಕಾರಿಗಳಿಗೆ ನೀಡಿದ್ದಾರೆ. ದೂರಿನಲ್ಲಿ ಕೇವಲ ಈ ಮೂವರು ವ್ಯಕ್ತಿಗಳ ಹೆಸರು ಮಾತ್ರ ಕೇಳಿಬಂದಿದೆ. ಆದರೆ ಈ ಅವ್ಯವಹಾರ ನಡೆದಿದೆ ಎನ್ನುವ ಸಮಯದಲ್ಲಿ ಸಂಬಂಧ ಪಟ್ಟ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಇದ್ದ ಕೆಲ ಅಧಿಕಾರಿಗಳ ಹೆಸರನ್ನು ಇಲ್ಲಿ ತಿಳಿಸಿದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ನನಗೆ ಏನು.. ಗೊತ್ತಿಲ್ಲ ಎಂದ ಅಧೀಕ್ಷಕಿ ಕೊನೆಗೂ ಹೇಳಿದ್ದೇನು ಗೋತ್ತಾ.?

ವೆನ್ಲಾಕ್ ಆಸ್ಪತ್ರೆಯಲ್ಲಿ ಸರ್ಜಿಕಲ್ ಗ್ಲೌಸ್ ಮತ್ತು ಇತರ ಸಾಮಗ್ರಿಗಳ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿರುವ ಕುರಿತು ಇಲ್ಲಿನ ಅಧೀಕ್ಷಕಿ ಅವರು ಪ್ರತಿಕ್ರಿಯಿಸುತ್ತ, ಮೊದಲಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ನನಗೆ ಏನು ಗೋತ್ತಿಲ್ಲ. ಎಸಿಬಿ ಅಧಿಕಾರಿಗಳಿಗೆ ಯಾರು ಈ ಕುರಿತು ದೂರು ನೀಡಿದ್ದಾರೆ. ಈ ಬಗ್ಗೆ ಎಸಿಬಿ ಅಧಿಕಾರಿಗಳಿಂದ ನಮಗೆ ಒಂದು ನೋಟಿಸ್ ಬಂದಿದೆ. ಅದು ಬಿಟ್ಟ ಬೇರೆ ಏನು ಗೋತ್ತಿಲ್ಲ ಎಂದ ಅವರು, ನಂತರ ಮಾತನಾಡುತ್ತ “ನೋಡಿ ನಾನು ಇಲ್ಲಿಗೆ ಬರುವ ಮೊದಲೇ ಇಲ್ಲಿ ಕೆಲ ಸಿಬ್ಬಂದಿ-ಸಿಬ್ಬಂದಿ ಮತ್ತು ಕೆಲಅಧಿಕಾರಿಗಳು-ಸಿಬ್ಬಂದಿಗಳ ಮಧ್ಯೆ ಕಚ್ಚಾಟ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಬಂದ ನಂತರವು ಕೆಲವು ಬಾರಿ ಇದೇ ರೀತಿ ಕಚ್ಚಾಟ ನಡೆದಿದೆ. ಅನೇಕ ಸಾರಿ ನಾನೇ ಸರಿಪಡಿಸಿದ್ದು ಉಂಟು. ಆದರೆ ಅವ್ಯವಹಾರ ನಡೆದಿರುವುದು ನನಗೆ ಗೋತ್ತಿಲ್ಲ, ಮತ್ತೇ ೧೦%-೧೫% ವಿಚಾರ..?! ಇದೇಲ್ಲಾ ಕೆಲವು ಸರಿ ಇರುತ್ತದೆ-ಬರುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಬಡಜನರ ಅನುಕೂಲಕ್ಕೆ ಇರುವ ಇತಂಹ ಸರಕಾರಿ ಆಸ್ಪತ್ರೆಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಎಸಿಬಿ ಅಧಿಕಾರಿಗಳ ತನಿಖೆಯ ಮೂಲಕ ಜನರಿಗೆ ನ್ಯಾಯ ಸಿಗಬೇಕಾಗಿದೆ .

error: Content is protected !!