Sunday, July 15 , 2018 2:32 AM











ಲಾರಿ ಚಾಲಕರ ದರೋಡೆಗೆ ಸಂಚು ರೂಪಿಸುತ್ತಿದ್ದ ಉಳ್ಳಾಲ ಮೂಲದ ಇಬ್ಬರು ಆರೋಪಿಗಳ ಬಂಧನ



77
ಮಂಗಳೂರಿನ ಉಳ್ಳಾಲ ಮಿಲ್ಲತ್ ನಗರದ ಫಲಾಲ್ ಮಂಜಿಲ್ ನಿವಾಸಿ ಮೊಹಮ್ಮದ್ ಅರ್ಪಾಜ್ (19), ಉಳ್ಳಾಲ ಮುಕ್ಕಚೇರಿ ನಿವಾಸಿ ಮೊಹಮ್ಮದ್ ಸುಹೈಲ್ (27) ಬಂಧಿತ ಆರೋಪಿಗಳು. ಬಂಧಿತರಿಂದ ದರೋಡೆಗೆ ಬಳಸಲು ಇರಿಸಿದ್ದ ಮಾರಕಾಸ್ತ್ರ ಮತ್ತು ಖಾರದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಮೇ 4ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಮತ್ತು ಸಿಬ್ಬಂದಿ  ಮಾರಿಪಳ್ಳ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ರೊಟ್ಟಿ ಗುಡ್ಡೆಯ ಬಳಿ ತಲುಪಿದಾಗ  ಪೊಲೀಸ್‌‌ರನ್ನು ಕಂಡು ಸುಮಾರು 6 ಜನ ಯುವಕರು ಓಡಿ ಹೋಗಲು ಪ್ರಯತ್ನಿಸಿದ್ದರು. ಕೂಡಲೇ ಪೊಲೀಸ್ ಸಿಬ್ಬಂದಿ ಅವರನ್ನು ಹಿಡಿದು ವಿಚಾರಿಸಿದ್ದರು. ಈ ಸಂದರ್ಭ ಆರೋಪಿಗಳ ಬಳಿ ಉದ್ದನೆಯ ಚಾಕು,  ಕಬ್ಬಿಣದ ರಾಡ್ ಮತ್ತು ಖಾರದ ಪುಡಿ ಪತ್ತೆಯಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ರಾತ್ರಿ ಸಮಯ ಲಾರಿ ಚಾಲಕರನ್ನೊ ಅಥವಾ ವಾಹನ ಚಾಲಕರನ್ನೊ ಸುಲಿಗೆ ಮಾಡಲು ಸಂಚು ರೂಪಿಸಿದ್ದು ಬಹಿರಂಗಗೊಂಡಿದೆ.  ಬಂಧಿತ ಆರೋಪಿಗಳ ಪೈಕಿ ಮೊಹಮ್ಮದ್ ಸುಹೆಲ್ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ಮತ್ತು ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ಅರ್ಫಾಜ್‌ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ಮತ್ತು ಬಂದರು ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
error: Content is protected !!