Tuesday, May 22 , 2018 1:30 PM











ಬೆಳ್ತಂಗಡಿ ಬಿಜೆಪಿ ಪಕ್ಷದ ಅಭ್ಯರ್ಥಿ ಹರೀಶ್ ಪೂಂಜರನ್ನು ಬಹುಮತದಿಂದ ಗೆಲ್ಲಿಸಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಮನವಿ



182

ಮಂಗಳೂರು : ಬೆಳ್ತಂಗಡಿಯ ಬಿಜೆಪಿ ಪಕ್ಷದ ಅಭ್ಯರ್ಥಿ ಯುವ ನಾಯಕ ಹರೀಶ್ ಪೂಂಜ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಬೆಳ್ತಂಗಡಿಯ ಮತದಾರರಲ್ಲಿ ಮನವಿ ಮಾಡಿದರು. ಅವರು ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಯುವಕರು ರಾಜಕೀಯವಾಗಿ ಮುಂದೆ ಬರಬೇಕು, ಈ ಕಾರಣದಿಂದಲೇ ನಿಮ್ಮ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಯುವ ನಾಯಕ ಹರೀಶ್ ಪೂಂಜ ಅವರನ್ನು ಪಕ್ಷ ಬಿಜೆಪಿಯ ಅಭ್ಯರ್ಥಿಯನ್ನಾಗಿ ಮಾಡಿದೆ. ಈ ಭಾರೀ ಅವರನ್ನು ನೀವು ಬಹುಮತದಿಂದ ಗೆಲ್ಲಿಸಿ ಎಂದರು. ನಂತರ ಮಾತನಾಡಿದ ಅವರು ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಅಭಿವೃದ್ಧಿಯ ವಿಚಾರ ಮಾತನಾಡುತ್ತಾರೆ. ಆದರೆ ಗಾಂಧಿ ಕುಟುಂಬ ೬೦ ವರ್ಷಗಳಿಂದ ಪ್ರತಿನಿಧಿಸುವ ಅಮೇಠಿ ಕ್ಷೇತ್ರಕ್ಕೆ ಕನಿಷ್ಠ ರೈಲ್ವೇ ಹಳಿಯನ್ನು ತರಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ತನ್ನ ಕ್ಷೇತ್ರವನ್ನೇ ಸುಧಾರಣೆ ಮಾಡಲಾಗದ ವ್ಯಕ್ತಿ ಕರ್ನಾಟಕದಲ್ಲಿ ಅಭಿವೃದ್ಧಿ ಪಾಠ ಮಾಡುತ್ತಾರೆ ಎಂದು ಕಿಡಿಕಾರಿದರು. ಮೋದಿ ಸರಕಾರದ ಅಭಿವೃದ್ಧಿಯೇ ರಾಹುಲ್ ಗಾಂಧಿಗೆ ಚಿಂತೆಯಾಗಿದೆ. ಶೌಚಾಲಯ ಕಟ್ಟೋಕೆ ಹೋದಾಗ ರಾಹುಲ್ ಗಾಂಧಿ ಅವರಿಗೆ ಸಮಸ್ಯೆಯಾಗುತ್ತದೆ. ಸರ್ಜಿಕಲ್ ಸ್ಟೈಕ್ ಆದಾಗ ರಾಹುಲ್ ಗಾಂಧಿ ಅವರಿಗೆ ಸಮಸ್ಯೆ ಕಾಡುತ್ತದೆ. ಬಡತನ ನಿರ್ಮೂಲನೆಗೆ ಪ್ರಯತ್ನ ಮಾಡಿದಾಗ ಕೂಡ ರಾಹುಲ್ ಗಾಂಧಿಗೆ ಸಮಸ್ಯೆಯಾಗುತ್ತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

error: Content is protected !!