Tuesday, May 22 , 2018 1:45 PM











ರೌಡಿಗಳು ಸಹಿತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ : ಪೊಲೀಸ್ ಆಯುಕ್ತ ವಿಫುಲ್ ಕುಮಾರ್



110

ಮಂಗಳೂರು : ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮಾತ್ರವಲ್ಲದೇ ರೌಡಿಗಳು ಸಹಿತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ಹೇಳಿದರು. ಅವರು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ೨,೭೫೬ ರೌಡಿಗಳ ಮೇಲೆ ಕಣ್ಗಾವಲು ಇಡಲಾಗಿದೆ ಹಾಗೂ ಸಮಾಜಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ೯೦ ಮಂದಿಯ ಮೇಲೂ ನಿಗಾ ಇಡಲಾಗಿದೆ ಎಂದರು. ೧,೯೦೮ ಶಸ್ತ್ರಾಸ್ತ್ರ ಠೇವಣಿ, ೭೫೩ ಸೆಕ್ಯುರಿಟಿ ಕೇಸ್ ದಾಖಲಾಗಿವೆ. ಭದ್ರತೆಗಾಗಿ ೧೧ ಸಿಎಪಿಎಫ್ ತುಕಡಿ, ಪಿಎಪಿ, ಹೋಂಗಾರ್ಡ್ ಸಹಿತ ೨,೭೦೦ ಸಿಬ್ಬಂದಿ ಇದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು ೮೭೭ ಬೂತ್‌ಗಳಿದ್ದು, ಮಂಗಳೂರು, ಮಂಗಳೂರು ನಗರ ಉತ್ತರ, ಮಂಗಳೂರು ದಕ್ಷಿಣ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೮೭೭ ಬೂತ್‌ಗಳಿವೆ. ೭೬ ಬೂತ್‌ಗಳನ್ನು ಕ್ಲಿಷ್ಟಕರ ಎಂದು ಗು

error: Content is protected !!