Sunday, September 23 , 2018 4:22 AMಬಂಟ್ವಾಳದ ಹರೀಶ್ ಪೂಜಾರಿ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರು ನೇರವಾಗಿ ಭಾಗಿಯಾಗಿದ್ದಾರೆ : ಸಚಿವ ರಮಾನಾಥ ರೈ339

ಮಂಗಳೂರು : ಬಂಟ್ವಾಳದ ಹರೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ನೇರ ಭಾಗಿಯಾಗಿದ್ದಾರೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು. ಅವರು ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಂಟ್ವಾಳದಲ್ಲಿ ಹರೀಶ್ ಪೂಜಾರಿ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರು ನೇರವಾಗಿ ಭಾಗಿಯಾಗಿದ್ದಾರೆ. ಮೋದಿಯಂತಹ ಜನ ಮನುಷ್ಯನ ಹತ್ಯೆ ಎಂದರೆ ನಾನು ಒಪ್ಪಿಕೊಳ್ಳುತ್ತಿದ್ದೇ ಆದರೆ ಕೇವಲ ರಾಜ್ಯದಲ್ಲಿ ನಡೆದ ಹತ್ಯೆಗಳ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿರುವುದು ಸರಿಯಲ್ಲ ಎಂದರು, ಸರ್ಕಾರದ ಸಾಧನೆ, ಅಭಿವೃದ್ಧಿ ನಮ್ಮ ಮೂಲ ಮಂತ್ರ. ಅಭಿವೃದ್ಧಿ ಬಗ್ಗೆ ಪ್ರತಿಪಕ್ಷಗಳೂ ಒಪ್ಪುತ್ತದೆ. ಜನಪರ ಕಾರ್ಯಕ್ರಮಗಳು ಪರಿಣಾಮಕಾರಿ ಅನುಷ್ಠಾನ ಆಗಿದೆ. ಆದರೆ, ಬಿಜೆಪಿಗೆ ಅಪಪ್ರಚಾರವೇ ಚುನಾವಣಾ ಅಸ್ತ್ರ. ಅಪಪ್ರಚಾರಕ್ಕೆ ಜನತೆ ಕಿವಿಗೊಡಬೇಡಿ ಅಭಿವೃದ್ಧಿಗೆ ಬೆಂಬಲ ಕೊಡಿ, ನಮಗೆ ಮತ ನೀಡಿ ಎಂದರು. ಹಿಂದೂಗಳ ಮತ ಬೇಡ ಎಂದು ನಾನು ಹೇಳಿಲ್ಲ. ತಲೆಕಟ್ಟವರು ಮಾತ್ರ ಇಂತಹ ಮಾತಾಡಲು ಸಾಧ್ಯ. ಇದು ಬಿಜೆಪಿಯ ಹತಾಶ ಮನೋಭಾವ ತೋರಿಸುತ್ತದೆ ಎಂದು ತಿಳಿಸಿದರು.

error: Content is protected !!