Sunday, July 15 , 2018 2:34 AM











ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಮಲದ ಚಿಹ್ನೆಗೆ ಮತ ನೀಡಿ. ಕಾಂಗ್ರೆಸಿಗರನ್ನು ನೇರವಾಗಿ ಇಟಲಿಗೆ ಅಟ್ಟಿ! : ಅಮಿತ್ ಶಾ



141

ಮಂಗಳೂರು : ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಮಲದ ಚಿಹ್ನೆಗೆ ಮತ ನೀಡಿ. ಕಾಂಗ್ರೆಸಿಗರನ್ನು ನೇರವಾಗಿ ಇಟಲಿಗೆ ಅಟ್ಟಿ. ಮೇ ೧೫ರಂದು ಸಿದ್ದರಾಮಯ್ಯರನ್ನು ಬದಲಿಸಿ ಯಡಿಯೂರಪ್ಪ ಸರಕಾರ ತನ್ನಿ ಎಂದು ಅಮಿತ್ ಶಾ ಕರೆ ನೀಡಿದರು. ಅವರು ರೋಡ್ ಶೋ ಸಂದರ್ಭದಲ್ಲಿ ಮಂಗಳೂರಿನ ಪ್ರಸಿದ್ಧ ಶ್ರೀ ಗೋಕರ್ಣನಾಥ್ ದೇವಾಲಯಕ್ಕೆ ಭೇಟಿ ನೀಡಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೇ ಬರುವ ಮೇ ೧೨ ಪರಿವರ್ತನೆಯ ಅವಕಾಶದ ದಿನ. ಇದುವೇ ಕರ್ನಾಟಕದ ಅಭಿವೃದ್ಧಿ ಗತಿಯನ್ನು ಬದಲಿಸುವ ದಿನ. ರಾಜ್ಯದಲ್ಲಿ ೨೪ ಕಾರ್ಯಕರ್ತರ ಹತ್ಯೆಯಾಗಿದೆ. ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದ ಒಬ್ಬನೇ ಒಬ್ಬ ಆರೋಪಿಯನ್ನೂ ಈ ಸರ್ಕಾರ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸದೆ ಅವರ ರಕ್ಷಣೆಗೆ ಈ ಕಾಂಗ್ರೆಸ್ ಸರಕಾರ ನಿಂತಿದೆ. ಹತ್ಯೆ ಮಾಡಿದವರನ್ನು ಇಷ್ಟು ದಿನ ರಕ್ಷಿಸಿದ್ದಿರೀ . ಆದರೆ ನಮ್ಮ ಪಕ್ಷ ಅಧಿಕಾರ ಬಂದ ದಿನದಿಂದಲೇ ಆರೋಪಿಗಳನ್ನು ಪಾತಾಳದಲ್ಲಿದ್ದರೂ ಹುಡುಕಿ ಬಂಧಿಸಲು ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಸರಕಾರ ಅತ್ಯಂತ ಭ್ರಷ್ಟ ಸರಕಾರ. ಸಿದ್ದರಾಮಯ್ಯಗೆ ೬೦ ಲಕ್ಷದ ರೂಪಾಯಿ ವಾಚ್ ಕೊಟ್ಟಿದ್ದು ಯಾರೆಂದು ಕೇಳಿದ್ದೆ? ಆದರೆ ಸಿದ್ರಾಮಯ್ಯ ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

error: Content is protected !!