Sunday, September 23 , 2018 3:58 AMಯಾವಾಗ ಬೇಕಾದರೂ ನನ್ನ ಹತ್ಯೆ ನಡೆಯಬಹುದು! : ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್714

ಮಂಗಳೂರು : ನಾನು ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ಹಿಂದುತ್ವಕ್ಕಾಗಿ ದುಡಿಯುತ್ತಿದ್ದೇನೆ. ನನ್ನ ಹತ್ಯೆ ಯಾವಾಗ ಬೇಕಾದರೂ ನಡೆಯಬಹುದು ಎಂದು ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದರು. ಅವರು ನಗರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ೧೯೯೨ರ ಅಯೋಧ್ಯೆ ಹೋರಾಟದಲ್ಲಿ ನಾನು ಭಾಗವಹಿಸಿದ್ದೇನೆ, ಮಾತ್ರವಲ್ಲದೇ ಹುಬ್ಬಳ್ಳಿಯ ಹೋರಾಟದಲ್ಲಿಯೂ ನಾನು ಧ್ವಜ ಹಾರಿಸಿದ್ದೇನೆ. ನಂತರದ ದಿನಗಳಲ್ಲಿ ಆತ್ಮಾಹುತಿ ದಳದ ರೀತಿಯಲ್ಲಿ ನಾನು ಕಾರ್ಯನಿರ್ವಹಿಸಿದ್ದೇನೆ. ಇದೀಗ ಕೆಲ ದಿನಗಳ ಹಿಂದೆ ಒಂದಿಷ್ಟು ಜನರಿಂದ ನನ್ನ ವೈಯಕ್ತಿಕ ತೇಜೋವಧೆ ನಡೆಯುತ್ತಿದೆ. ಹಾಗೂ ನನ್ನ ಮೇಲೆ ಕೆಟ್ಟ ಆಪಾದನೆಗಳು ಮತ್ತು ಸುಳ್ಳು, ಮಾಡಲಾಗುತ್ತಿದೆ. ನಾನು ಅತಂಹ ಯಾವುದೇ ವಿಚಾರದಲ್ಲಿ ಭಾಗಿಯಾಗಿಲ್ಲ, ನಾನು ಪ್ರಾಮಾಣಿಕವಾಗಿ   ಹಿಂದುತ್ವಕ್ಕಾಗಿ ದುಡಿಯುತ್ತಿದ್ದೇನೆ ಎಂದು ಅವರು ತಿಳಿಸಿದರು.

error: Content is protected !!