Tuesday, May 22 , 2018 1:46 PM











ನಕಲಿ ವೋಟರ್ ಐಡಿ, ಸಾಕ್ಷಿ ಸಹಿತ ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್



208

ಬೆಂಗಳೂರು : ಬಿಜೆಪಿ ಹೊರಿಸಿದ್ದ ‘ರಾಜರಾಜೇಶ್ವರಿ ನಗರದ ನಕಲಿ ಗುರುತಿನ ಚೀಟಿ ಪತ್ತೆ’ ಆರೋಪವನ್ನು ಕಾಂಗ್ರೆಸ್ ಸರಾಸಗಟಾಗಿ ತಿರಸ್ಕರಿಸಿದೆ. ಮಾತ್ರವಲ್ಲ ಗುರುತಿನ ಚೀಟಿ ಪತ್ತೆಯಾದ ಅಪಾರ್ಟ್ ಮೆಂಟ್ ಬಿಜೆಪಿ ನಾಯಕನಿಗೆ ಸೇರಿದ್ದು ಎಂದು ಸಾಕ್ಷಿ ಸಮೇತ ತಿರುಗೇಟು ನೀಡಿದೆ. ಈ ಕುರಿತು ಬೆಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದುಕೊಂಡ ಅಪಾರ್ಟ್ ಮೆಂಟ್ ಮಂಜುಳಾ ನಂಜಮುರಿ ಅವರಿಗೆ ಸೇರಿದ್ದು, ಅವರು ಬಿಜೆಪಿ ನಾಯಕರು ಮತ್ತು ಮಾಜಿ ಕಾರ್ಪೊರೇಟರ್ ಎಂದು ಆರೋಪಿಸಿದ್ದಾರೆ. ಮಂಜುಳಾ ನಂಜಮುರಿ ತಮ್ಮ ಫ್ಲ್ಯಾಟನ್ನು ಮಗ ರಾಕೇಶ್ ಗೆ ಬಾಡಿಗೆಗೆ ನೀಡಿದ್ದರು. ರಾಕೇಶ್ ಕೂಡ ಬಿಜೆಪಿ ನಾಯಕರಾಗಿದ್ದು, ಬಿಜೆಪಿ ಟಿಕೆಟ್ ನಲ್ಲಿ 2015 ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಸುರ್ಜೇವಾಲಾ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ. ರಾಜರಾಜೇಶ್ವರಿ ನಗರ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಜೊತೆಗೆ ರಾಕೇಶ್ ಇರುವ ಚಿತ್ರ ಹಾಗೂ ಬಿಬಿಎಂಪಿ ಚುನಾವಣೆಗೆ ಜಾಲಹಳ್ಳಿ ವಾರ್ಡ್ ನಿಂದ ರಾಕೇಶ್ ಸ್ಪರ್ಧಿಸಿದ್ದರು ಎನ್ನುವುದಕ್ಕೆ ಬಿಬಿಎಂಪಿಯ ಸ್ಪರ್ಧಿಗಳ ಪಟ್ಟಿಯನ್ನೂ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದಾರೆ.

error: Content is protected !!