Thursday, August 16 , 2018 7:48 PMಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ!291

ಮಂಗಳೂರು : ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಅವರು ಇಂದು ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯ ವೇಳೆ ಈ ಘಟನೆ ನಡೆಯಿತ್ತು. ವಿವರ : ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಮಧ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಎದ್ದು ಹೊರ ನಡೆದರು. ಕಾಂಗ್ರೆಸ್ ನಾಯಕ ಪಿ ಚಿದಂಬರಂನ್ನು ಸ್ವಾಗತಿಸಲು ಅವರು ಹೊರಟು ಹೋಗಿದ್ದು ಪೂಜಾರಿ ಕಣ್ಣು ಕೆಂಪಗಾಗಿಸಿತು. “ಹರೀಶ್ ಕುಮಾರ್ ಯಾಕೆ ಎದ್ದು ಹೋದ್ರು? ನನಗಿಂತ ಚಿದಂಬರಂ ಮುಖ್ಯ ಆಯ್ತಾ? ಚಿದಂಬರಂ ಚುನಾವಣಾ ಸಮಯದಲ್ಲಿ ಮಾತ್ರಾ ಬರ್ತಾರೆ. ಚಿದಂಬರಂ ಬಗ್ಗೆ ಬಿಜೆಪಿಯವರು ಹೇಳಿದ್ರೆ ಕಾಂಗ್ರೆಸ್ ಸರ್ವನಾಶ ಆಗುತ್ತದೆ. ಹರೀಶ್ ಕುಮಾರ್ ಯಾಕೆ ಇಲ್ಲಿ ಆಟ ಆಡೋಕೆ ಬಂದಿದ್ದಾ,” ಎಂದು ತುಳುವಿನಲ್ಲೇ ಕಾಂಗ್ರೆಸ್ ಮುಖಂಡರ ಬಳಿ ಆಕ್ರೋಶ ಹೊರಹಾಕಿದರು.

error: Content is protected !!