Sunday, July 15 , 2018 2:31 AM











ಮಂಗಳೂರು ನಗರ ಸಹಿತ ರಾಜ್ಯದೆಲ್ಲೆಡೆ ಕಮಲ ಅರಳಲಿದೆ : ಮಂಗಳೂರಿನಲ್ಲಿ ಅಮಿತ್ ಷಾ



122

ಮಂಗಳೂರು: ಹಿಂದು ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೇ 12ರಂದು ಕರ್ನಾಟಕದ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ. ಮೇ 15ರಂದು ಮತ ಎಣಿಕೆ ನಡೆಯುವಾಗ ಮಂಗಳೂರು ನಗರ ಸಹಿತ ರಾಜ್ಯದೆಲ್ಲೆಡೆ ಕಮಲ ಅರಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು. ಮಂಗಳೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದು ಯುವಕರ ನಿರಂತರ ಹತ್ಯೆಯಾಗಿದೆ. ಹಂತಕರನ್ನು ಬಂಧಿಸುವ ಬದಲು ಸರ್ಕಾರವೇ ಅವರಿಗೆ ಪರೋಕ್ಷ ಬೆಂಬಲ ನೀಡಿದೆ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತೊಗೆಯಲು ಕರ್ನಾಟಕದ ಜನತೆ ಸಜ್ಜಾಗಿದ್ದಾರೆ ಎಂದರು. ಮೇ 12ರ ತನಕ ಸಿದ್ದರಾಮಯ್ಯ ಹಂತಕರನ್ನು ರಕ್ಷಿಸಲಿ. ಬಳಿಕ ಅವರ ಆಟ ನಡೆಯುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಬರಲಿದೆ. ಹಿಂದು ಯುವಕರ ಹಂತಕರು ಪಾತಾಳದಲ್ಲಿ ಅಡಗಿದ್ದರೂ ಪತ್ತೆಹಚ್ಚಿ ಜೈಲಿಗೆ ಹಾಕುತ್ತೇವೆ. ಅಭಿವೃದ್ಧಿ ವಿರೋಧಿ, ರೈತ ವಿರೋಧಿ, ಗೂಂಡಾ ಸರ್ಕಾರವನ್ನು ಕಿತ್ತೆಸೆದು ದೇಶದಲ್ಲಿ ಅಭಿವೃದ್ಧಿ ಪರ ನಂಬರ್ 1 ರಾಜ್ಯವಾಗಿ ಕರ್ನಾಟಕವನ್ನು ಬಿಜೆಪಿ ಮಾಡಲಿದೆ ಎಂದು ಹೇಳಿದರು.

error: Content is protected !!