Sunday, July 15 , 2018 2:36 AM











ದುರಹಂಕಾರ ಬಿಡದಿದ್ದರೆ ಸಿದ್ದರಾಮಯ್ಯಗೆ ಉಳಿಗಾಲವಿಲ್ಲ : ಜನಾರ್ದನ ಪೂಜಾರಿ



323

ಮಂಗಳೂರು : ಸಿಎಂ ಸಿದ್ದರಾಮಯ್ಯ ಅವರು ತನ್ನಲ್ಲಿರುವ ದುರಹಂಕಾರ ಬಿಡದಿದ್ದರೆ ಸಿದ್ದರಾಮಯ್ಯಗೆ ಈ ಭಾರೀ ಉಳಿಗಾಲವಿಲ್ಲ ಎಂದು ಕಾಂಗ್ರೇಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದರು. ಅವರು ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾನು ಸಲಹೆಗಳನ್ನು ಕೊಟ್ಟಿದ್ದು ನಿಜ. ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸೋಲುತ್ತಾರೆ ಎಂದು ಹೇಳಿದ್ದೆ. ಪಕ್ಷಕ್ಕಿಂತ ತಾನೇ ದೊಡ್ಡವನೆಂದು ನಡೆದುಕೊಂಡರೆ ಉಳಿಗಾಲವಿಲ್ಲ ಎಂದಿದ್ದೆ. ಈಗಲೂ ಹೇಳುತ್ತೇನೆ, ದುರಹಂಕಾರ ಬಿಟ್ಟರೆ ಸಿದ್ದರಾಮಯ್ಯ ಉಳೀತಾರೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. “ದುರಹಂಕಾರ ಬಿಡದಿದ್ದರೆ ಸೋಲುತ್ತಾರೆ. ನಾನು ಸಲಹೆ ಕೊಟ್ಟಿದ್ದು ಕಾಂಗ್ರೆಸ್ ನ ಉಳಿವಿಗೆ ಮಾತ್ರ,” ಎಂದು ಅವರು ತಿಳಿಸಿದರು.

error: Content is protected !!