Sunday, September 23 , 2018 4:29 AMವಿಶ್ವೇಶ್ವರಯ್ಯ ಅಂತಾ ಹೇಳೋಕೆ ಬರದ ವ್ಯಕ್ತಿ ಪ್ರಧಾನಿಯಾಗೋ ಕನಸು ಕಾಣ್ತಿದ್ದಾರೆ: ಸ್ಮೃತಿ ಇರಾನಿ211

ಕಲಬುರಗಿ: ವಂದೇ ಮಾತರಂ ಹಾಡೋದಕ್ಕೆ ಸಮಯ ಇಲ್ಲದ, ವಿಶ್ವೇಶ್ವರಯ್ಯ ಅಂತಾ ಹೇಳೋಕೆ ಬರದ ವ್ಯಕ್ತಿ ಪ್ರಧಾನಿಯಾಗೋ ಕನಸು ಕಾಣ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಟೀಕಾ ಪ್ರಹಾರ ನಡೆಸಿದರು. ಜೇವರ್ಗಿಯ ಯಡ್ರಾಮಿಯಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿ ಹಾಗೂ ಅಮಿತ್ ಷಾ ಜನರ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರೆ, ರಾಹುಲ್ ತನ್ನ ಭವಿಷ್ಯದ ಬಗ್ಗೆ ಚಿಂತಿಸೋಕೆ ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕರು ಬಡವರ ಬಗ್ಗೆ ಚಿಂತಿ ಮಾಡಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಆಗಬೇಕೆಂದಿದ್ದರೆ ಬಿಜೆಪಿಗೆ ಮತ ನೀಡಿ ಎಂದು ಬಿಜೆಪಿ ಪರ ಮತಯಾಚಿಸಿದರು. ಕಾಂಗ್ರೆಸ್ ಐದು ವರ್ಷದಲ್ಲಿ ಲೂಟಿ ಮಾಡೋದನ್ನ ಬಿಟ್ಟು ಬೇರೇನು ಮಾಡಿಲ್ಲ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ. ದೇಶದಲ್ಲಿ ಮೂರೂವರೆ ವರ್ಷದಲ್ಲಿ ಐದು ಕೋಟಿ ಎಪ್ಪತ್ತು ಲಕ್ಷ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಒದಗಿಸಿ ಕೊಟ್ಟಿದೆ ಎಂದರು.

error: Content is protected !!