Tuesday, May 22 , 2018 1:48 PMಕಾಂಗ್ರೆಸ್ ಅಭ್ಯರ್ಥಿಗಳಾದ ಜೆ.ಆರ್. ಲೋಬೋ, ರಮಾನಾಥ ರೈ ಅವರ ಬಹುಮತದ ಗೆಲುವು ನಿಶ್ಚಿತ : ಜನಾರ್ದನ ಪೂಜಾರಿ427

ಮಂಗಳೂರು : ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳಾದ ಜೆ.ಆರ್. ಲೋಬೋ, ಹಾಗೂ ರಮಾನಾಥ ರೈ ಅವರು ಬಹುಮತದಿಂದ ಗೆಲ್ಲುತ್ತಾರೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದರು. ಅವರು ನಗರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಜೆ.ಆರ್ ಲೋಬೋ ಅವರು ಈ ಬಾರಿ ಬಹುಮತಗಳಿಂದ ಗೆಲ್ಲುತ್ತಾರೆ. ಮಾತ್ರವಲ್ಲದೇ ಕ್ಷೇತ್ರದಲ್ಲಿ ಉತ್ತಮ ಅಭಿವೃಧ್ಧಿ ಮಾಡಿರುವ ಈ ಇಬ್ಬರು ಅಭ್ಯರ್ಥಿಗಳ ಬಗ್ಗೆ ಬಿಜೆಪಿ ಎಷ್ಟೇ ಅಪಪ್ರಚಾರ ಮಾಡಿದರೂ ಇವರ ಗೆಲುವು ನಿಶ್ಚಿತ ಎಂದರು. ಸುಂದರರಾಂ ಶೆಟ್ಟಿ ರಸ್ತೆ ನಾಮಕರಣ ಕುರಿತ ಪ್ರಕರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ಅವರ ಬಗ್ಗೆ ಸುಮ್ಮನೆ ಅಪಪ್ರಚಾರ ಮಾಡುವುದು ಸರಿಯಲ್ಲ. ಇದು ಜಿಲ್ಲೆಗೆ ಮಾತ್ರವಲ್ಲದೇ ಕರಾವಳಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

error: Content is protected !!