Wednesday, June 20 , 2018 8:24 PMಹೃದಯಾಘಾತದಿಂದ ವಿಧಾನಪರಿಷತ್ ಸದಸ್ಯ ಅಪ್ಸರ್ ಅಗಾ ನಿಧನ525

ಬೆಂಗಳೂರು : ವಿಧಾನಪರಿಷತ್ ಸದ್ಯ ಸಯ್ಯದ್ ಮುದೀರ್ ಅಗಾ(ಅಪ್ಸರ್ ಅಗಾ)(67) ಹೃದಯಾಘಾತದಿಂದ ಜೂನ್ 08 ರ ಮಧ್ಯರಾತ್ರಿ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ರಾಮನಗರದ ದೊಡ್ಡ ಮಸೀದಿ ನಿವಾಸಿಯಾಗಿದ್ದ ಇವರು, ಜೆಡಿಎಸ್ನಿಂದ ವಿಧಾನಪರಿಷತ್ತಿಗೆ 2012 ಜೂನ್ 18 ರಂದು ಆಯ್ಕೆಯಾಗಿದ್ದರು. ಜೆಡಿಎಸ್​ನ ಟಿ.ಎ. ಶರವಣ ಅವರೊಂದಿಗೆ ಎಂಎಲ್​ಸಿಯಾಗಿ ಆಯ್ಕೆಯಾಗಿದ್ದ ಅವರ ಅಧಿಕಾರಾವಧಿ ಇದೇ ಜೂನ್ 17 ರಂದು ಮುಕ್ತಾಯವಾಗುತ್ತಿತ್ತು. ಅವರ ನಿಧನಕ್ಕೆ ನಾಡಿನ ಗಣ್ಯ ವರ್ಗ ಕಂಬನಿ ಮಿಡಿದಿದೆ. ಇಂದು ಮಧ್ಯಾಹ್ನ 3 ಗಂಟೆಗೆ ರಾಮನಗರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಸೇರಿದಂತೆ ಹಲವು ನಾಯಕರು ಅಂತಿಮ ದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!