Thursday, August 16 , 2018 7:48 PMಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಮುಂಭಾಗದ ಅಶ್ವತ್ಥ ಮರ ಬಿದ್ದು ನಾಲ್ವರಿಗೆ ಗಾಯ : ದೃಶ್ಯ ಸಿಸಿಟಿವಿಯಲ್ಲಿ ಸೆರೆ198

ಮಂಗಳೂರು : ನಗರದ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿರುವ ಅಶ್ವತ್ಥ ಮರ ಬಿದ್ದು ನಾಲ್ವರು ಗಾಯಗೊಂಡಿರುವ ನಡೆದಿದೆ. ಗಾಯಗೊಂಡ ವ್ಯಕ್ತಿಗಳನ್ನು ಸುರೇಖಾ (೬೩), ಪ್ರವೀಣ್ ಸುವರ್ಣ (೪೯), ನವೀನ್ (೪೫), ತೇಜಶ್ವಿನಿ (೨೦) ಎಂದು ಗುರುತಿಸಲಾಗಿದೆ. ಘಟನೆಯ ವಿವರ : ಶುಕ್ರವಾರ ರಾತ್ರಿ ಸುಮಾರು ೮ ಗಂಟೆಗೆ ಈ ಮರ ಬಿದ್ದಿದ್ದು, ಮಂಗಳಾದೇವಿ ದೇವಸ್ಥಾನ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ನಾಲ್ವರಿಗೆ ಗಾಯವಾಗಿದ್ದು, ಇದರಲ್ಲಿ ಓರ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವಸ್ಥಾನದ ಪೂಜೆ ಸಮಯ ಮತ್ತು ಶುಕ್ರವಾರದಂದು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಸಮಯದಲ್ಲಿ ಮರ ಬಿದ್ದಿದೆ. ದೇವಸ್ಥಾನದ ಮುಂಭಾಗದಲ್ಲಿರುವ ನಾಗನಕಟ್ಟೆಯಲ್ಲಿ ಈ ಬೃಹತ್ ಅಶ್ವತ್ಥ ಮರ ಇತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮರ ಬಿದ್ದಿದೆ. ಮರ ಉರುಳಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

error: Content is protected !!