Thursday, August 16 , 2018 7:48 PM











ಸಚಿವ ಸ್ಥಾನಕ್ಕೆ ಆಗ್ರಹ: ಐವನ್​ ಡಿಸೋಜ, ಮುನಿಯಪ್ಪ ಬೆಂಬಲಿಗರ ಪ್ರತಿಭಟನೆ



725

ಬೆಂಗಳೂರು: ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್​ ಸದಸ್ಯ ಐವನ್​ ಡಿಸೋಜ ಮತ್ತು ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಬೆಂಬಲಿಗರು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಪರಮೇಶ್ವರ್​ ನಿವಾಸದ ಮುಂದೆ ಮುನಿಯಪ್ಪ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಪರಮೇಶ್ವರ್​ ಅವರನ್ನು ಭೇಟಿ ಮಾಡಿದ ಐವನ್​ ಡಿಸೋಜ ಬೆಂಬಲಿಗರು,  ಜನಸಂಖ್ಯೆಯ ಶೇ. 4 ರಷ್ಟು ಕ್ರೈಸ್ತರು ಇದ್ದೇವೆ. ನಮ್ಮ ಸಮುದಾಯಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಕೇವಲ 2 ಟಿಕೆಟ್​ ನೀಡಿದ್ದೀರಿ. ಕಾಂಗ್ರೆಸ್​ಗೆ ನಮ್ಮ ಸಮುದಾಯದ ಬೆಂಬಲ ಇದೆ. ಹಾಗಾಗಿ ಐವನ್​ ಡಿಸೋಜಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು

error: Content is protected !!