Sunday, September 23 , 2018 11:34 PMಬಿಜೆಪಿ ಸೇರ್ತಾರಾ ಕಾಂಗ್ರೆಸ್ ಅತೃಪ್ತರು? ಬಿಎಸ್ ವೈ ಎಸೆದ ಹೊಸ ಬಾಂಬ್!400

ಬೆಂಗಳೂರು : ಕಾಂಗ್ರೆಸ್ಸಿನ ಅತೃಪ್ತ ಶಾಸಕರೆಲ್ಲ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ವಿಧಾನಸಭೆ ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಯುವ ಮೋರ್ಚಾ ಸಭೆಯೊಂದರಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ, ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಕುರಿತು ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯ ಸಮಯದಲ್ಲಿ ಅನ್ಯಾಯವಾಗಿದೆ ಎಂದು ಬಂಡಾಯವೆದ್ದಿರುವ ಕೆಲ ಅತೃಪ್ತ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಅವರು ಹೊಸ ಬಾಂಬ್ ಎಸೆದಿದ್ದಾರೆ!. ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಾಜಿ ಸಚಿವರಾದ ಎಂ ಬಿ ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಮುಂತಾದವರಿಗೆ ಸೂಕ್ತ ಸ್ಥಾನ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಈ ಶಾಸಕರ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ. ಅತೃಪ್ತರ ಮನವೊಲಿಸಲು ಕಾಂಗ್ರೆಸ್ಸಿನ ಮತ್ತು ಜೆಡಿಎಸ್ ನ ರಾಜ್ಯ ನಾಯಕರು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಇದೀಗ ಸದರಿ ಶಾಸಕರು ಹೈಕಮಾಂಡ್ ಬಾಗಿಲು ಬಡಿದಿದ್ದು. ನಿನ್ನೆ(ಜೂನ್ 08) ಪತ್ರಕರ್ತರ ಬಳಿ ಮಾತನಾಡುತ್ತಿದ್ದ ಎಂ ಬಿ ಪಾಟೀಲ್, ತಮಗೆ ಸುಮಾರು 20 ಶಾಸಕರ ಬೆಂಬಲವಿದೆ ಎಂದಿರುವುದು ಮತ್ತು ಇದೀಗ ಬಿ ಎಸ್ ವೈ ನೀಡಿದ ಹೇಳಿಕೆಗಳನ್ನು ತಾಳೆ ಹಾಕಿ ನೋಡಿದರೆ ಕರ್ನಾಟಕ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲಕರ ಬೆಳವಣಿಗೆ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ!

error: Content is protected !!