Sunday, September 23 , 2018 3:50 AMಶೀರೂರು ಶ್ರೀಗಳ ಸಾವಿನ ಪ್ರಕರಣಕ್ಕೆ ತಾರ್ಕಿಕ ಅಂತ್ಯ!; ಪೊಲೀಸರ ಕೈ ಸೇರಿದ ಅಂತಿಮ ವರದಿ243

ಮಣಿಪಾಲ: ಭಾರಿ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದ್ದ ಶೀರೂರು ಶ್ರೀಗಳ ಸಾವಿನ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಿದೆ. ಶೀರೂರು ಶ್ರೀಗಳಿಗೆ ವಿಷಪ್ರಾಶನವಾಗಿಲ್ಲ, ಅವರದ್ದು ಸಹಜ ಸಾವು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯು ವರದಿ ನೀಡಿದೆ. ಹಿಂದೆ ನೀಡಿದ್ದ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ಎಸ್‌ಎಲ್‌ ವರದಿಗಳನ್ನು ತಾಳೆ ನೋಡಿ ಹೀಗೆ ವರದಿ ನೀಡಲಾಗಿದೆ.

ಶೀರೂರು ಶ್ರಿಗಳು ಅನ್ನನಾಳದ ರಕ್ತಸ್ರಾವ ಹಾಗೂ ಕೋನ್ನಿಕ್‌ ಲಿವರ್‌ ಸಿರಾಸಿಸ್‌ನಿಂದ ಮೃತರಾಗಿದ್ದಾರೆ. ದೇಹದಲ್ಲಿ ಯಾವುದೇ ವಿಷ ಅಂಶ ಪತ್ತೆಯಾಗಿಲ್ಲ ಎಂದು ವೈದ್ಯರು ಷರಾ ಬರೆದಿದ್ದಾರೆ. ಜುಲೈ 19ರಂದು ಶೀರೂರು ಶ್ರೀಗಳು ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಶ್ರೀಗಳ ಸಾವು ಅಸಹಜ, ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆ ಎಂದು ಹಲವರು ಆರೋಪ ಮಾಡಿದ್ದರು. ಶ್ರೀಗಳ ಪೂರ್ವಾಶ್ರಮದ ಸಹೋದರ ಈ ಬಗ್ಗೆ ಪೊಲೀಸರಿಗೆ ದೂರು ಸಹ ನೀಡಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಯನ್ನೂ ನಡೆಸಿದ್ದರು. ಆದರೆ ಎಫ್‌ಎಸ್‌ಎಲ್‌ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿ ಅನ್ವಯ ಶೀರೂರು ಶ್ರೀಗಳದ್ದು ಸಹಜ ಸಾವು ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಯನ್ನೂ ನಡೆಸಿದ್ದರು. ಆದರೆ ಎಫ್‌ಎಸ್‌ಎಲ್‌ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿ ಅನ್ವಯ ಶೀರೂರು ಶ್ರೀಗಳದ್ದು ಸಹಜ ಸಾವು ಎಂದು ತಿಳಿದುಬಂದಿದೆ.

error: Content is protected !!