Sunday, September 23 , 2018 3:00 AM











ಪ್ರಧಾನಿ ಮೋದಿ ಮಾತ್ರ ಧೈರ್ಯವಂತ: ಜನಾರ್ದನ ಪೂಜಾರಿ ಹೇಳಿದ್ದೇನು ಗೋತ್ತೇ..?



2372

ಮಂಗಳೂರು: ಅಚ್ಚರಿ ಎಂಬಂತೆ ಜನಾರ್ದನ ಪೂಜಾರಿ ಪ್ರಧಾನಿ ನರೇಂದ್ರ ಮೋದಿಯ ಧೈರ್ಯವನ್ನು ಕೊಂಡಾಡಿದ್ದಾರೆ. ಕಾಂಗ್ರೆಸ್ ತಪ್ಪು ಮಾಡುತ್ತಿದೆ. ಹೀಗೆ ಮುಂದುವರಿದರೆ ಒಂದು ದಿನವೂ ಸರಕಾರ ಮಾಡಲು ಸಾಧ್ಯವಿಲ್ಲ. ಪೆಟ್ರೋಲ್ ಅಕ್ರಮ ದಾಸ್ತಾನು ಮಾಡುವವರನ್ನು ಮೊದಲು ಜೈಲಿಗೆ ಹಾಕಬೇಕು. ಅಕ್ರಮ ತಡೆಗಟ್ಟಿದರೆ ಬೆಲೆ ಏರಿಕೆ ಕಡಿಮೆಯಾಗುತ್ತದೆ. ಆದರೆ ಈ ಧೈರ್ಯ ಯಾರಿಗೂ ಇಲ್ಲ. ಈ ಧೈರ್ಯ ಪ್ರಧಾನಿ ಮೋದಿಗೆ ಮಾತ್ರ ಇದೆ ಎಂದು ಕುದ್ರೋಳಿಯಲ್ಲಿ ಭಾನುವಾರ ಮಾಧ್ಯಮದ ಮುಂದೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಹೇಳಿದ್ದಾರೆ.

ಬಂದ್‌ಗೆ ಕರೆ ಕೊಟ್ಟವರು ದೇಶ ವಿರೋಧಿಗಳು; ಇಂಧನ ಬೆಲೆ ಏರಿಕೆ ಖಂಡಿಸಿಭಾರತ ಬಂದ್ ಕರೆ ನೀಡಿದವರು ದೇಶ ವಿರೋಧಿಗಳು, ಕರೆ ಕೊಟ್ಟವರು ಇದರ ನಷ್ಟ ಭರಿಸಬೇಕು. ಕರೆ ಕೊಡುವುದು ಸುಲಭ, ಬಂದ್ ಬಳಿಕ ಆದ ನಷ್ಟಕ್ಕೆ ಅವರೇ ಹೊಣೆಯಾಗಿರುವುದರಿಂದ ಜಾಗೃತರಾಗಿರಬೇಕು ಎಂದರು. ನಂತರ ಲೋಕ ಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಜನಾರ್ದನ ಪೂಜಾರಿ. ಸ್ಪರ್ಧೆ ಮಾಡಬಹುದು, ಮಾಡದೇ ಇರಬಹುದು. ಕಾಂಗ್ರೆಸ್ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ ಎಂದರು.

error: Content is protected !!