Sunday, September 23 , 2018 4:08 AMಚಾರ್ಮಾಡಿ ಘಾಟ್ ನಲ್ಲಿ ಕಣ್ಣು ಹಾಯಿಸಿದಷ್ಟು ದೂರ ಭಾರೀ ಟ್ರಾಫಿಕ್ ಜಾಮ್788

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕ ಹೈರಾಣನಾಗಿದ್ದಾನೆ. ಭಾನುವಾರ (ಸೆ 9) ಬೆಳಗ್ಗೆಯಿಂದ ಜಾಮ್ ಆಗಿರುವ ಘಾಟ್ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ಕೆಟ್ಟು ನಿಂತ ಪರಿಣಾಮ ಬೆಳಗ್ಗೆ 4 ಗಂಟಿಯಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಚಾರ್ಮಾಡಿಯ ಮೂರನೇ ತಿರುವಿನಿಂದ ವಾಹನಗಳು ಸುಮಾರು ಹತ್ತು ಕಿ.ಮೀ.ನಷ್ಟು ದೂರ ಸಾಲುಗಟ್ಟಿ ನಿಂತಿವೆ.

ಶಿರಾಡಿ ಘಾಟ್ ಬಂದ್ ಆದಾಗಿನಿಂದ ತೀವ್ರ ವಾಹನ ದಟ್ಟಣೆಗೊಳಗಾಗಿರುವ ಚಾರ್ಮಾಡ್ ಘಾಟ್, ರಾಜಧಾನಿಯಿಂದ ಕರಾವಳಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಕೆಲವು ದಿನಗಳ ಹಿಂದೆ, ಲಘು ವಾಹನ ಸಂಚಾರಕ್ಕೆ ಶಿರಾಡಿ ಘಾಟ್ ನಲ್ಲಿ ಅನುವು ಮಾಡಿಕೊಡಲಾಗಿತ್ತು. ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನ ಎರಡನೇ ಹಾಗೂ ಮೂರನೇ ತಿರುವಿನಲ್ಲಿ ಗುಡ್ಡ ಕುಸಿದ ಪರಿಣಾಮ ಕೆಲವು ದಿನಗಳ ಕಾಲ ಘಾಟಿಯನ್ನು ಬಂದ್ ಮಾಡಲಾಗಿತ್ತು. ಇದಾದ ನಂತರ ಭಾರೀ ವಾಹನಗಳು ನಿಷೇಧದ ನಡುವೆಯೂ ಸಂಚರಿಸುತ್ತಿವೆ.

ಆಗಸ್ಟ್ ತಿಂಗಳ ಅಂತ್ಯದಲ್ಲಿ ಚಾರ್ಮಾಡಿ ಘಾಟ್‌ ನಲ್ಲಿ ಲಾರಿಯೊಂದು ಕೆಟ್ಟು ಹೋಗಿ, ಘಾಟ್ ಆರಂಭದಿಂದ ಅಣ್ಣಪ್ಪಸ್ವಾಮಿ ದೇವಾಲಯದವರೆಗೆ ಅಂದರೆ ಸುಮಾರು ಹತ್ತು ಕಿ.ಮೀವರೆಗೆ ಟ್ರಾಫಿಕ್‌ ಜಾಮ್‌ ಉಂಟಾಗಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

error: Content is protected !!