Sunday, September 23 , 2018 11:09 PM











ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಲಾಭಾಂಶ ವಿತರಣೆ : ಸದಸ್ಯರ ಕಿವಿಗೆ ಹೂ ಇಟ್ಟರಾ ಖಾವಂದರು?!



5102

ಕೃಪೆ : ಸಮಾಚಾರ

ಮಂಗಳೂರು : ದೇವರು, ನಂಬಿಕೆ, ಜನಪ್ರಿಯತೆ, ಅಧಿಕಾರ ಕೇಂದ್ರದ ಸಖ್ಯಗಳ ಆಚೆಗೆ ವೀರೇಂದ್ರ ಹೆಗಡೆಯವರಿಗೆ ಇವತ್ತು ಸಿಗುತ್ತಿರುವ ಸಾಮಾಜಿಕ ಮನ್ನಣೆಯ ಹಿಂದೆ ಕೆಲಸ ಮಾಡುತ್ತಿರುವುದು ಗ್ರಾಮೀಣಾಭಿವೃದ್ಧಿ ಸಂಘಗಳು. ಇದು ಸಮಾಜ ಸೇವೆ ನೆರಳಿನಲ್ಲಿ ನಡೆಯುತ್ತಿರುವ ದಕ್ಷಿಣ ಕನ್ನಡ ಮೂಲದ ‘ಮೀಟರ್ ಬಡ್ಡಿ’ ವ್ಯವಹಾರದ ಫಾಲೋಅಪ್ ರಿಪೋರ್ಟ್: ಮುಂದುವರಿದ ಕಹಾನಿ.

ಎಸ್‌ಕೆಡಿಆರ್‌ಡಿಪಿ ಹೆಸರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮುಖ್ಯಸ್ಥರು, ಖಾವಂದರು, ವೀರೇಂದ್ರ ಹೆಗಡೆಯವರು ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಸಂಘದ ಲಾಭಾಂಶ ವಿತರಣೆಯ ವಿಚಾರ ಈಗ ಮುನ್ನೆಲೆ ಬಂದಿದೆ. ಲಾಭಾಂಶ ವಿತರಣೆ ಹೆಸರಿನಲ್ಲಿ ಭಾರಿ ಪ್ರಚಾರವನ್ನು ಪಡೆದುಕೊಂಡಿದ್ದವರು. ಈಗ ತಳಮಟ್ಟದಲ್ಲಿ ಲಭ್ಯವಾಗುತ್ತಿರುವ ಮಾಹಿತಿ ಆರಂಭಿಕ ಪ್ರಚಾರವನ್ನು ಪಕ್ಕಕ್ಕಿಟ್ಟು, ತಳಮಟ್ಟದ ವಾಸ್ತವಗಳಿಗೆ ಕನ್ನಡಿ ಹಿಡಿಯುತ್ತಿದೆ. ಸಂಘದ ಸದಸ್ಯರಿಗೆ ಸುಮಾರು ೨೦೧ ಕೋಟಿ ರೂಪಾಯಿ ಲಾಭಾಂಶ ವಿತರಣೆ ಮಾಡಲಾಗುವುದು ಎಂದು ಎಸ್‌ಕೆಡಿಆರ್‌ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ, ಡಾ. ಎಲ್. ಎಚ್. ಮಂಜುನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. “ಸಂಘದ ಪ್ರತಿ ಸದಸ್ಯರಿಗೆ ಕನಿಷ್ಟ ೫ ಸಾವಿರದಿಂದ ೮ ಸಾವಿರದವರೆಗೆ ಲಾಭಾಂಶವನ್ನು ವಿತರಣೆ ಮಾಡುವುದಾಗಿ,” ಅವರು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಡಾ. ಎಲ್. ಎಚ್. ಮಂಜುನಾಥ್ ಪತ್ರಿಕಾಗೋಷ್ಠಿ ವರದಿ. ಕೃಪೆ: ಕನ್ನಡ ಪ್ರಭ.

ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದಾಗಿ ಹೋಗಿ, ಆಗಸ್ಟ್ ೨೨ರಂದು ಸಂಜೆ ಧರ್ಮಸ್ಥಳದ ಅಮೃತ ವರ್ಷಿಣಿ ಭವನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಘದ ಸದಸ್ಯರಿಗೆ ಸಾಂಕೇತಿಕವಾಗಿ ಲಾಭಾಂಶವನ್ನು ವಿತರಣೆ ಮಾಡಿದ್ದರು. ವಾಸ್ತವ ಏನೆಂದರೆ, ಸಿಎಂ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಲಾಭಾಂಶ ವಿತರಿಸುವ ಕೆಲಸ ಮಾಡಿದ್ದು, ಅದಕ್ಕಾಗಿಯೇ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿದ್ದು, ಎಲ್ಲವೂ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸದಂತೆ ಭಾಸವಾಗುತ್ತಿದೆ. ಕಾರಣ, ತಳಮಟ್ಟದಲ್ಲಿ ಹಲವು ಸಂಘದ ಸದಸ್ಯರು ಇವತ್ತಿಗೂ ಲಾಭಾಂಶ ಹಣದ ನಿರೀಕ್ಷೆಯಲ್ಲಿದ್ದಾರೆ. ಕೆಲವರಿಗೆ ಲಾಭಾಂಶ ವಿತರಣೆಯಾಗಿದ್ದರೂ, ಡಾ. ಎಲ್. ಎಚ್. ಮಂಜುನಾಥ್ ಮಾಹಿತಿ ನೀಡಿದಂತೆ ಕನಿಷ್ಟ ೫ ಸಾವಿರ ರೂಪಾಯಿಗಳಲ್ಲ, ಬದಲಿಗೆ ೩೦ ರೂಪಾಯಿಂದ ಆರಂಭವಾಗಿದೆ. ಈ ಸ್ಟೋರಿಯ ಸಂಪೂರ್ಣ ಮಾಹಿತಿಗಾಗಿ, ಮೂಲ ವರದಿಯನ್ನು ಓದಲು ಇದನ್ನು ಒತ್ತಿ

 

error: Content is protected !!