Thursday, August 16 , 2018 7:48 PMಮಂಗಳೂರು, ಅಪಾಯದಲ್ಲಿದ್ದ 10 ಮೀನುಗಾರರನ್ನು ರಕ್ಷಿಸಿದ ತಟರಕ್ಷಣಾ ಪಡೆ!343

ಮಂಗಳೂರು : ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ನೀಡಿರುವ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮೀನುಗಾರಿಕೆಗೆ ತೆರಳಿ, ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ತಮಿಳುನಾಡು ಮೂಲದ 10 ಮೀನುಗಾರರನ್ನು ರಕ್ಷಿಸಲಾಗಿದೆ. ಕರಾವಳಿಯಲ್ಲಿ ಮುಂಜಾನೆಯಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆಯ ಜೊತೆಗೆ ಭಾರೀ ಗಾಳಿ ಬೀಸುತ್ತಿರುವುದರಿಂದ ಸಮುದ್ರ ಪ್ರಕ್ಷುಬ್ದಗೊಂಡಿದೆ. ಭಾರೀ ಅಲೆಗಳು ಏಳುತ್ತಿದ್ದು, ಇಂಥ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಅಪಾಯಕಾರಿ ಎಂದು ಮುನ್ನೆಚ್ಚರಿಕೆ ನೀಡಲಾಗಿತ್ತು.

ಕೇರಳದ ಕೊಚ್ಚಿಯಿಂದ ಮೀನುಗಾರಿಕೆಗೆ ಹೊರಟಿದ್ದ ಸಂತ ಜೋಸೆಫ್ ಹೆಸರಿನ ಮೀನುಗಾರಿಕಾ ದೋಣಿಯ ಇಂಜಿನ್ ನಿನ್ನೆ ರಾತ್ರಿ ಕೈಕೊಟ್ಟಿತ್ತು. ಈ ಪರಿಣಾಮ ಮಂಗಳೂರು ಸಮೀಪ ಮೀನುಗಾರಿಕಾ ದೋಣಿಯಲ್ಲಿದ್ದವರು ಅಪಾಯಕ್ಕೆ ಸಿಲುಕಿದ್ದರು. ಮಂಗಳೂರಿನಿಂದ 15 ನಾಟಿಕಲ್ ಮೈಲ್ಸ್ ದೂರದಲ್ಲಿ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಮೀನುಗಾರಿಕಾ ಬೋಟ್ ಅಪಾಯದಲ್ಲಿ ನಿಲುಕಿರುವ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ನಡೆಸಿತು. ಐಸಿಜಿಎಸ್ ಅಮಾರ್ತ್ಯ ನೌಕೆಯಲ್ಲಿ ಕಾರ್ಯಾಚರಣೆಗೆ ಇಳಿದ ತಟರಕ್ಷಣಾ ಪಡೆ ಅಪಾಯದಲ್ಲಿ ಸಲುಕಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ. ಶುಕ್ರವಾರ ತಡರಾತ್ರಿ ಕಾರ್ಯಾಚರಣೆ ಅರಂಭವಾಗಿದ್ದರೂ ಮೀನುಗಾರರ ರಕ್ಷಣೆ ಸಾಧ್ಯವಾಗಿರಲಿಲ್ಲ. ಆದರೆ ಇಂದು ಮುಂಜಾನೆ 10 ಮಂದಿ ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಪಡೆ ಮೀನುಗಾರಿಕಾ ಬೋಟನ್ನು ಸುರಕ್ಷಿತವಾಗಿ ಎನ್‌ಎಂಪಿಟಿಗೆ ಎಳೆದು ತಂದಿದೆ.

error: Content is protected !!