Sunday, September 23 , 2018 3:46 AM











ಸಾರ್ವಜನಿಕರಿಗೆ ತೊಂದರೆಯಾದರೆ ಸುಮ್ನೆ ಇರುವುದಿಲ್ಲ,! ಮತ್ತೆ ಅಧಿಕಾರಿಗಳನ್ನು ತರಟೆಗೆ ತೆಗೆದುಕೊಂಡ ಸಂಸದ ನಳಿನ್! : ವಿಡೀಯೋ ವೈರಲ್



2971

ಮಂಗಳೂರು : ಮಳೆಯಿಂದಾಗಿ ಹಾನಿಗೊಳಗಾದ ಏರ್ ಪೋರ್ಟ್ ಸುತ್ತಮುತ್ತಲಿನ ಕೊಳಂಬೆ ಉನಿಲೆ ಪ್ರದೇಶಗಳಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಅಲ್ಲಿನ ಸಮಸ್ಯೆಗಳ ಬಗ್ಗೆ ಕೆಲ ಅಧಿಕಾರಿಗಳ ನಿರ್ಲಕ್ಷದ ಕುರಿತು ಆಕ್ರೋಶಗೊಂಡ ಸಂಸದರು. ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳನ್ನು ತರಟೆಗೆ ತೆಗೆದುಕೊಂಡಿದ್ದಾರೆ.

ಹೌದು ಅನೇಕ ಸಮಸ್ಯೆಗಳನ್ನು ಇಲ್ಲಿನ ಸಾರ್ವಜನಿಕರು ಮಳೆಯ ನಂತರ ಅನುಭವಿಸುತ್ತಿದ್ದಾರೆ. ನೀವು ಏನು ಮಾಡುತ್ತಿದ್ದಿರಿ ಎಂದು ಪ್ರಶ್ನೆಸಿದ್ದಾರೆ ಮಾತ್ರವಲ್ಲದೇ ಸಾರ್ವಜನಿಕರಿಗೆ ತೊಂದರೆಯಾದರೆ ನಾನು ಸುಮ್ನೆ ಇರುವುದಿಲ್ಲ, ನಿಮಗೆ ಆಗದಿದ್ದರೆ ಬಿಟ್ಟುಕೊಡಿ, ಅನಗತ್ಯ ಮಾತುಗಳನ್ನು ಹಾಡಿದರೆ ನಿಮ್ಮನ್ನು ನಿಮ್ಮ ಊರಿಗೆ ಕಳುಹಿಸಬೇಕಾಗುತ್ತದೆ ಎಂದು ಏಚ್ಚರಿಕೆ ನೀಡಿ, ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ನಡೆಸಲು ಸಂಸದರು ತಿಳಿಸಿದ್ದರು.

ಈ ಕುರಿತ ವಿಡೀಯೋವೊಂದು ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ವೇಳೆ ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ, ಏರ್ಪೋರ್ಟ್ ನಿರ್ದೇಶಕರು, ಸಂಬಂಧಪಟ್ಟ ಎಂಜಿನೀಯರ್ಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!