Sunday, September 23 , 2018 4:21 AM42 ಕಿ.ಗ್ರಾಂ ಗಾಂಜಾ ಸೇರಿದಂತೆ ಒಟ್ಟು 8.78 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡ ಕಾವೂರು ಪೊಲೀಸರು1659

ಮಂಗಳೂರು; 7.56 ಲಕ್ಷ ರೂ. ಮೌಲ್ಯದ 42 ಕಿ.ಗ್ರಾಂ ಗಾಂಜಾ ಸೇರಿದಂತೆ ಒಟ್ಟು 8.78 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡ ಕಾವೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೇರಳ ತಿರುವನಂತಪುರಂನ ವರ್ಕಳ ಎ.ಪಿ.ರಾಜೀವ(48), ಬಂಟ್ವಾಳ ಉರಿಮಜಲು ಕಾಯರಡಿ ನಿವಾಸಿ ಅಬ್ದುಲ್ ರಹೀಂ(26) ಬಂಧಿತರು. ಇನ್ನೋರ್ವ ಆರೋಪಿ ಖಲಂದರ್ ಶಾಫಿ ಪರಾರಿಯಾಗಿದ್ದಾನೆ.

7.56 ಲಕ್ಷ ರೂ. ಮೌಲ್ಯದ 42 ಕಿ.ಗ್ರಾಂ ಗಾಂಜಾ, 80 ಸಾವಿರ ರೂ. ಮೌಲ್ಯ ಆಟೋ ರಿಕ್ಷಾ, 40 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ, 2 ಸಾವಿರ ಹಾಗೂ 500 ರೂ. ಮೌಲ್ಯದ ಮೊಬೈಲ್‌ಗಳು, ಲಗೇಜ್ ಬ್ಯಾಗ್ ಸೇರಿದಂತೆ ಒಟ್ಟು 8.78 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಸಿಪಿ ಉಮಾಪ್ರಶಾಂತ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ರಾಜೇಂದ್ರ ಡಿ.ಎಸ್ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಕೆ.ಆರ್ ನಾಯ್ಕ ಅವರು ಎಎಸ್‌ಐ ಹರೀಶ್ ಎಚ್.ವಿ, ಸಿಬ್ಬಂದಿ ರಾಜಶೇಖರ್ ಗೌಡ, ಪ್ರಮೋದ್ ಎ.ಎಸ್, ದುರ್ಗಾಪ್ರಸಾದ್ ಶೆಟ್ಟಿ, ವಿಶ್ವನಾಥ, ವಿನಯ್ ಕುಮಾರ್ ಎಚ್.ಕೆ, ರಶೀದ್ ಶೇಖ, ಸಿಖಂದರ್ ಚಿಂಚಲಿ, ಇಬ್ರಾಹಿಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!