Sunday, September 23 , 2018 3:01 AMಕಾರ್ಯಕರ್ತನ ಸಮಸ್ಯೆಗೆ ಧ್ವನಿಯಾದ ಶಾಸಕ ವೇದವ್ಯಾಸ ಕಾಮತ್; ಭಾರೀ ಪ್ರಶಂಸೆ1993

Posted By; Ranjith Madanthyar

ಮಂಗಳೂರು; ನಗರದ ಇಂಟಕ್ ಮುಖಂಡನಿಗೆ ಕರೆ ಮಾಡಿದ ಹಿಂದೂ ಸಂಘಟನೆ ಮುಖಂಡನನ್ನು ವಿಚಾರಣೆಗಾಗಿ ಠಾಣೆಗೆ ಕರೆಯಿಸಿದ ವೇಳೆ ಕದ್ರಿ ಪೊಲೀಸ್ ಠಾಣೆಯಲ್ಲಿ ಎಡವಟ್ಟುವೊಂದು ನಡೆದು ಹೋಗಿದೆ. ಹಿಂದೂ ಮುಖಂಡನನ್ನು ಕರೆಸಿ ಹಲ್ಲೆ ಯತ್ನ ನಡೆಸಿದ ವೇಳೆ ಶಾಸಕರಿಗೆ ಅವಮಾನ ಮಾಡಿದ ಪೇದೆಯೊಬ್ಬರ ಕುರಿತು ಶಾಸಕ ವೇದವ್ಯಾಸ ಕಾಮತ್ ಅವರು ಪೊಲೀಸ್ ಪೇದೆಯನ್ನು ಖಾರವಾದ ಮಾತಿನಲ್ಲಿ ಬಿಸಿ ಮುಟ್ಟಿಸಿದ್ದಾರೆ.

ಘಟನೆಯ ವಿವರ; ಕಾಂಗ್ರೆಸಿಗರು ಕರೆ ನೀಡಿದ ಭಾರತ ಬಂದ್ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಮುಖಂಡ ಕೆ.ಆರ್.ಶೆಟ್ಟಿ ಅಡ್ಯಾರ್ ಅವರು, ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿಗೆ ಕರೆ ಮಾಡಿದ್ದರು. ಸಚಿವ ಯು.ಟಿ.ಖಾದರ್ ಅವರು ಹಿಂದೆ ಬಂದ್ ಮಾಡಿದವರಿಗೆ ಚಪ್ಪಲಿ ಏಟು ಹೊಡೆಯುವಂತೆ ಹೇಳಿದ್ದಾರೆ. ಈಗ ನೀವು ಬಲಾತ್ಕಾರವಾಗಿ ಬಂದ್ ಮಾಡುವ ವೇಳೆ ಒಬ್ಬನ ತಲೆ ಒಡೆದಿದ್ದೀರಿ. ಈಗ ನಾವು ಕೆಎಸ್ಸಾರ್ಟಿಸಿಯಲ್ಲಿದ್ದೇವೆ. ನೀವು ಬನ್ನಿ ನಿಮಗೆ ಚಪ್ಪಲಿಯಲ್ಲಿ ಹೊಡೆಯುತ್ತೇ” ಎಂದು ಹೇಳಿದ್ದರು. ಈ ವೆಳೆ ಕದ್ರಿ ಠಾಣೆಗೆ ಬಾ ಎಂದು ಪುನೀತ್ ಉತ್ತರಿಸಿ ಬಳಿಕ ನಾನೇ ಬರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಬಳಿಕ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು.

ಈ ಕುರಿತು ಮಂಗಳವಾರ ಕದ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಕ್ಕಾಗಿ ಕೆ.ಆರ್.ಶೆಟ್ಟಿ ಅವರನ್ನು ಪೊಲೀಸರು ಕರೆ ಮಾಡಿ ಠಾಣೆಗೆ ಬರುವಂತೆ ಸೂಚಿಸಿದರು. ಎಸ್‌ಐ ಮಾರುತಿ ಅವರು ವಿಚಾರಣೆ ನಡೆಸಿ ಠಾಣೆಯಲ್ಲಿಯೇ ಜಾಮೀನು ನೀಡಬಹುದಾದ ಪ್ರಕರಣವಾದ್ದರಿಂದ ಇನ್‌ಸ್ಪೆಕ್ಟರ್ ಸೂಚನೆಯಂತೆ ತಕ್ಷಣ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.ಕೆ .ಆರ್.ಶೆಟ್ಟಿ ಕದ್ರಿ ಠಾಣೆಯಲ್ಲಿ ಇದ್ದ ಹಿನ್ನೆಲೆಯಲ್ಲಿ ಹಿಂದೂ ಜಾಗರಣೆ ವೇದಿಕೆಯ ಶರತ್ ಪದವಿನಂಗಡಿ ಮತ್ತಿತರರು ಠಾಣೆಗೆ ಆಗಮಿಸಿದರು. ಈ ಸಂದರ್ಭ ಆರ್.ಕೆ. ಶೆಟ್ಟಿ ಮಾತನಾಡುತ್ತಿದ್ದ ವೇಳೆ ಒಬ್ಬ ಪೊಲೀಸ್ ಎಳೆದಾಡಿ ಹಲ್ಲೆಗೆ ಮುಂದಾದರು ಎನ್ನಲಾಗಿದೆ. ಈ ಸಂದರ್ಭ ಹಿಂದೂ ಮುಖಂಡ ಶರತ್ ಪದವಿನಂಗಡಿ ಶಾಸಕ ವೇದವ್ಯಾಸ ಕಾಮತ್ ಗೆ ಕರೆ ಮಾಡಿ ವಿಷಯ ತಿಳಿಸಿದರು.

ಈ ಸಂದರ್ಭ ತನ್ನ ಕರೆಯನ್ನು ಪೊಲೀಸ್ ಪೇದೆಗೆ ನೀಡುವಂತೆ ಶಾಸಕರು ಸೂಚಿಸಿದರು. ಆಗ ಪೊಲೀಸ್ ಉಢಾಪೆಯಿಂದ “ ಶಾಸಕ ನಿನಗೆ ಆಗಿರಬಹುದು, ನನಗಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಶಾಸಕರು ಕದ್ರಿ ಪೊಲೀಸ್ ಠಾಣೆಯ ದೂರವಾಣಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ. ತಕ್ಷಣ ಪೊಲೀಸ್ ಠಾಣೆಗೆ ಆಗಮಿಸಿದ ವೇದವ್ಯಾಸ ಕಾಮತ್ ಅರ್ಧ ಗಂಟೆ ಕಾಲ ಪೊಲೀಸರಿಗೆ ಚಾರ್ಜ್ ಮಾಡಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಸಮಾಧಾನಕ್ಕೆ ಮುಂದಾದರು. ಇನ್ನೂ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಹೇಳಿದರು. ಅತಿರೇಕವಾಗಿ ವರ್ತಿಸಿದ ಪೊಲೀಸ್‌ಗೆ ಇನ್‌ಸ್ಪೆಕ್ಟರ್ ಸಹಿತ ಮೇಲಧಿಕಾರಿಗಳೂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಹೇಳುವುದು ಹೀಗೆ: ಪುನೀತ್ ಶೆಟ್ಟಿ ಎಂಬವರು ಕೇಸ್ ನೀಡಿದಂತೆ ಆರೋಪಿ ಕೆ.ಆರ್.ಶೆಟ್ಟಿ ಅವರನ್ನು ಠಾಣೆಗೆ ಕರೆಸಲಾಗಿತ್ತು. ಎಸ್‌ಐ ಅವರು ಠಾಣೆಯ ನಿಯಮಗಳಂತೆ ಜಾಮೀನು ನೀಡಿ ಬಿಡುಗಡೆಗೆ ಸಿದ್ಧತೆ ಮಾಡಿದ್ದರು. ಮಧ್ಯೆ ಅವರು ಕರ್ತವ್ಯ ನಿಮಿತ್ತ ಹೋರ ಹೋದರು. ಈ ಹೊತ್ತಿಗೆ ಕೆ.ಆರ್.ಶೆಟ್ಟಿ ಠಾಣೆಯಿಂದ ಹೊರ ಹೋದಾಗ ಸೆಂಟ್ರಿ ತಡೆದಿದ್ದಾರೆ. ಅದಕ್ಕೆ ಶೆಟ್ಟಿ ಕಡೆಯವರು ಇದನ್ನು ನೋಡಿ ಶಾಸಕರಿಗೆ ಕರೆ ಮಾಡಿದ್ದಾರೆ. ಕರೆಯನ್ನು ಸ್ವೀಕರಿಸದ ಕಾರಣಕ್ಕೆ ಠಾಣೆಗೆ ಬಂದಿದ್ದಾರೆ. ಪೊಲೀಸರಿಗೆ ಆರೋಗ್ಯ ಸರಿ ಇರಲಿಲ್ಲ. ಬಳಿಕ ಶಾಸಕರು ವಾಪಸ್ ಹೋಗಿದ್ದಾರೆ.

error: Content is protected !!