Sunday, September 23 , 2018 4:19 AMಅಂತಾರಾಜ್ಯ ಕಳ್ಳರ ಬಂಧನ – 24 ಲಕ್ಷ ರೂ. ಮೌಲ್ಯದ ವಾಹನಗಳು ಪೊಲೀಸ್ ವಶಕ್ಕೆ197

ರಾಯಚೂರು: ಆಂಧ್ರಪ್ರದೇಶ ಮೂಲದ ಕುಖ್ಯಾತ ಅಂತರ್ ರಾಜ್ಯದ 4 ಮಂದಿ ಕಳ್ಳರನ್ನು ರಾಯಚೂರಿನ ಶಕ್ತಿನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 24 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶ ಗೋದಾವರಿ ಜಿಲ್ಲೆಯ ಗಂಗಾಧರ (39), ಸತೀಶ್ (26), ಹೈದರಾಬಾದ್ ನಗರದ ಮೊಹಮದ್ ಮುಸ್ತಫಾ ಹಾಗೂ ಖಾಲಿದ್ ಅಕ್ತರ್ (52) ಬಂಧಿತ ಆರೋಪಿಗಳು.

ರಾಯಚೂರಿನ ಶಕ್ತಿನಗರ ಹಾಗೂ ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಟಿಪ್ಪರ್ ಹಾಗೂ ಲಾರಿ ಕಳ್ಳತನವಾಗಿತ್ತು. ಕಳ್ಳರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಕಿಶೋರ ಬಾಬು ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತ್ತು. ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ 18 ಲಕ್ಷ ರೂ. ಮೌಲ್ಯದ ಟಿಪ್ಪರ್ ಹಾಗೂ 6 ಲಕ್ಷ ರೂ. ಮೌಲ್ಯದ ಲಾರಿ ಸೇರಿದಂತೆ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

error: Content is protected !!