Sunday, September 23 , 2018 4:23 AM











ಕುಖ್ಯಾತ ಆರೋಪಿ ಪೋಲೀಸರ ಕೈ ತಪ್ಪಿಸಿ ಎಸ್ಕೇಪ್!



958

ಮಂಗಳೂರು; ಕೇರಳದ ಕಾಸರಗೋಡಿನಲ್ಲಿ ನಡೆದ ಕೊಲೆ ಮತ್ತು ಕಳ್ಳತನ ಪ್ರಕರಣದ ಆರೋಪಿಯೊಬ್ಬ ಪೊಲೀಸರ ಕೈ ತಪ್ಪಿಸಿ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಯನ್ನು ಅಜ್ಜಾವರ ಸಮೀಪದ ಬೊಳಂಬ ಹೌಸ್ ನಿವಾಸಿ ಅಬ್ದುಲ್ ಅಜೀಜ್(35) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಈತ ಇತ್ತೀಚೆಗೆ ಕೇರಳದ ಕಾಸರಗೋಡಿನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಕೇರಳದ ಹೊಸ ದುರ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾನೆ. ಸುಳ್ಯ ಪೊಲೀಸ್ ಠಾಣೆಯ ಹಳೆಯ ಕಳವು ಪ್ರಕರಣಕ್ಕೆ ಸಂಭಂದಿಸಿದಂತೆ ನ್ಯಾಯಲಯಕ್ಕೆ ಇಂದು ಕೇರಳದ ಇಬ್ಬರು ಪೊಲೀಸರು, ಹೊಸದುರ್ಗ ಜೈಲಿನಿಂದ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್ ಕೇರಳದ ಹೊಸದುರ್ಗ ಜೈಲಿಗೆ ಕರೆದುಕೊಂಡು ಹೋಗಲು ಸುಳ್ಯ ಬಸ್ ನಿಲ್ದಾಣಕ್ಕೆ ಬಂದು ಬಸ್‌ನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಆರೋಪಿಯು ಮೂತ್ರ ವಿಸರ್ಜನೆ ಮಾಡಬೇಕೇಂದು ಹೇಳಿ ಒಬ್ಬ ಕೇರಳದ ಪೊಲೀಸ್ ಸಿಬ್ಬಂದಿಯೊಬ್ಬರು ಆತನನ್ನು ಜೊತೆಗೆ ಶೌಚಾಲಯಕ್ಕೆ ಕರೆದುಕೊಂಡು ಹೋದಾಗ ಆ ಪೊಲೀಸ್ ಸಿಬ್ಬಂದಿಯನ್ನು ದೂಡಿ ಬಸ್ ನಿಲ್ದಾಣದ ಕಾಂಪೌಂಡ್ ಎಗರಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

error: Content is protected !!