Sunday, September 23 , 2018 4:21 AM











ಸತತ ಮಳೆಗೆ; ಭೂಕುಸಿತ ಸಂಭವಿಸಿ ಮಣ್ಣಿನಡಿಯಲ್ಲಿ ಸಿಲುಕಿ ಮೂವರು ಸಾವು



115

ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿದ್ದ ಮಳೆಗೆ ಇದುವರೆಗೆ ಕೇವಲ ಆಸ್ತಿಪಾಸ್ತಿ ಮಾತ್ರ ನಷ್ಟವಾಗಿದ್ದರೆ, ಇದೀಗ ಭೂಕುಸಿತ ಸಂಭವಿಸಿದ ಕಾರಣ ಮಣ್ಣಿನಡಿಯಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಮಡಿಕೇರಿ ಸಮೀಪದ ತಾಳತ್‍ಮನೆಯಲ್ಲಿ ವಿದ್ಯುತ್ ತಂತಿ ತಗುಲಿ ಮಹಿಳೆ ಸಾವನ್ನಪ್ಪಿದ್ದರು, ಅದರ ಬೆನ್ನಲ್ಲೇ ಸಮೀಪದ ಕಾಟಕೇರಿಯಲ್ಲಿ ಗುಡ್ಡಕುಸಿದ ಕಾರಣ ಮಣ್ಣಿನಡಿಗೆ ಒಂದೇ ಕುಟುಂಬದ ನಾಲ್ವರು ಸಿಲುಕಿದ್ದು ತಕ್ಷಣ ಕಾರ್ಯಾಚರಣೆ ನಡೆಸಿ ಮಣ್ಣಿನಿಂದ ಹೊರತೆಗೆಯಲಾಯಿತಾದರೂ ಅಷ್ಟರಲ್ಲೇ ಮೂವರು ಮೃತಪಟ್ಟಿದ್ದರು.

ಒಬ್ಬನನ್ನು ರಕ್ಷಿಸಲಾಗಿದ್ದು, ಈತ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರನ್ನು ಯಶವಂತ್, ವೆಂಕಟರಮಣ ಹಾಗೂ ಪವನ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ. ಕಳೆದ ಹಲವು ದಶಕಗಳ ನಂತರ ಕುಂಭದ್ರೋಣ ಮಳೆಯು ಕೊಡಗನ್ನು ಇನ್ನಿಲ್ಲದಂತೆ ಕಾಡಿದೆ. ಕಾವೇರಿ, ಲಕ್ಷ್ಮಣತೀರ್ಥ, ಹಾರಂಗಿ, ಹಟ್ಟಿಹೊಳೆ, ಬರಾಪೊಳೆ ಹೀಗೆ ಇಲ್ಲಿರುವ ಎಲ್ಲ ನದಿ, ತೊರೆಗಳು ತುಂಬಿ ಹರಿಯುತ್ತಿದ್ದು ತೋಟ, ಗದ್ದೆ, ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ

error: Content is protected !!