Sunday, September 23 , 2018 11:21 PMಪ್ರಜಾಪ್ರಭುತ್ವವನ್ನು ಕೊಂದಿದ್ದು ನಾವಲ್ಲ, ಕಾಂಗ್ರೆಸ್ : ಅಮಿತ್ ಶಾ ಕಿಡಿ138

ಬೆಂಗಳೂರು : “ಪ್ರಜಾಪ್ರಭುತ್ವವನ್ನು ಕೊಂದಿದ್ದು ಬಿಜೆಪಿಯಲ್ಲ, ಕಾಂಗ್ರೆಸ್” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಈ ಪರಿ ರಾಜಕೀಯ ತಲ್ಲಣ ನಡೆಯುತ್ತಲೇ ಇದ್ದರೂ ಮೌನವಾಗಿಯೇ ಇದ್ದ ಅಮಿತ್ ಶಾ ಇದೀಗ ಮೌನ ಮುರಿದಿದ್ದಾರೆ. ಟ್ಬಿಟ್ಟರ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಅವರು, ಕರ್ನಾಟಕದ ಜನಾದೇಶಕ್ಕೆ ತಕ್ಕಂತೆ ಬಿಜೆಪಿ ಸರ್ಕಾರ ರಚಿಸಿದೆ ಎಂದಿದ್ದಾರೆ. ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ಕಾಂಗ್ರೆಸ್ 78 ಸ್ಥಾನ, ಜೆಡಿಎಸ್ 38 ಸ್ಥಾನ ಮತ್ತು ಇತರರು 2 ಸ್ಥಾನ ಗೆದ್ದಿದ್ದರು. ರಾಜ್ಯದ 24 ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿ ಈ ನಡೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಅಮಿತ್ ಶಾ ಪ್ರತಿಕ್ರಿಯೆ ಹೀಗಿದೆ. ನಿಜವಾಗಿಯೂ ಪ್ರಜಾಪ್ರಭುತ್ವವನ್ನು ಕೊಂದಿದ್ದು ಬಿಜೆಪಿಯಲ್ಲ. ಕಾಂಗ್ರೆಸ್. ಯಾವಾಗ ಜನಾದೇಶ ಹೊರಬಿತ್ತೋ ಆಗಲೇ ಜೆಡಿಎಸ್ ಗೆ ಅವಕಾಶವಾದಿಯಂತೇ ಬೆಂಬಲ ಘೋಷಿಸಿದ ಕಾಂಗ್ರೆಸ್ ಆ ಕ್ಷಣದಲ್ಲೇ ಪ್ರಜಾಪ್ರಭುತ್ವವನ್ನು ಕೊಂದಿದೆ. ಈ ನಿರ್ಧಾರ ತೆಗೆದುಕೊಂಡಿದ್ದು ಕರ್ನಾಟಕದ ಒಳಿತಿಗಲ್ಲ, ರಾಜಕೀಯ ಹಿತಾಸಕ್ತಿಗೆ. ನಾಚಿಕೆಗೇಡು! ಎಂದಿದ್ದಾರೆ ಅಮಿತ್ ಶಾ.

 

error: Content is protected !!