Thursday, August 16 , 2018 7:46 PMಶಿರೂರು ಶ್ರೀಗಳಿಗೆ ವಿಷಪ್ರಾಶನ? ಉಡುಪಿ ಶ್ರೀಕೃಷ್ಣನೇ ಬಲ್ಲ!: ಆಹಾರದಲ್ಲಿ ‘ವಿಷ’ವೋ? ‘ವಿಷ’ ಆಹಾರವೋ..?2371

ಉಡುಪಿ: ‘ಆಹಾರ ಪ್ರಾಶನದಲ್ಲಿ ವಿಷ ಇದ್ದರೆ ಒಬ್ಬರಿಗೆ ಮಾತ್ರ ಈ ರೀತಿ ಆಗಲು ಹೇಗೆ ಸಾಧ್ಯ? ಶ್ರೀಗಳಿಗೆ ಪ್ರತ್ಯೇಕ ಆಹಾರ ನೀಡಲಾಗಿತ್ತೆ? ವಿಷ ಹೇಗೆ ಆಹಾರ ಸೇರಲು ಸಾಧ್ಯ? ಹೀಗೆ ನಾನಾ ಪ್ರಶ್ನೆಗಳು ಎದ್ದಿವೆ. ಎಲ್ಲದರ ಉತ್ತರವನ್ನು ಉಡುಪಿ ಶ್ರೀಕೃಷ್ಣನೇ ಬಲ್ಲ.

ಶಿರೂರು ಶ್ರೀಗಳು ವಿಷ ಸೇವಿಸಿರುವುದು ನಿಜ, ಫುಡ್ ಪಾಯ್ಸನ್ ಇರಬಹುದು ಅಥವಾ ಬಲವಂತ ವಿಷ ಪ್ರಾಶನವಾಗಿರಬಹುದು, ಈ ಸಮಯಕ್ಕೆ ಯಾವುದನ್ನು ಖಚಿತವಾಗಿ ಹೇಳಲಾಗದು, ಪೊಲೀಸರ ಕಣ್ಗಾವಲಿನಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ಈ ಬಗ್ಗೆ ತಿಳಯಲಿದೆ ‘ ಎಂದು ಕೆಎಂಸಿ ಡಾ. ಅವಿನಾಶ್ ಶೆಟ್ಟಿ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಫುಡ್ ಪಾಯ್ಸನ್ ಆಗುವುದಾದರೆ ಅದು ಕೇವಲ ಸ್ವಾಮೀಜಿಗಳಿಗೆ ಮಾತ್ರ ಏಕೆ? ಆ ಆಹಾರ ಸೇವಿಸಿದ ಎಲ್ಲರಿಗೂ ಆಗಬೇಕಿತ್ತು. ಇತ್ತೀಚೆಗೆ ದೇವರ ವಿಗ್ರಹದ ಸ್ಥಳ ಬದಲಾವಣೆಯಂಥ ಕೆಲವು ಸಂಗತಿಗಳು ಸ್ವಾಮೀಜಿಗಳಿಗೆ ತೀವ್ರ ಬೇಸರ ತಂದಿದ್ದವು. ಜೊತೆಗೆ ಅವರ ನೇರ ಸ್ವಭಾವವೂ ಅವರಿಗೆ ಮುಳುವಾಗಿರಬಹುದು ಎಂದು ಬರ್ಕೂರು ಸಂಸ್ಥಾನದ ಸ್ವಾಮೀಜಿ ಸಂತೋಷ ಭಾರತಿ ಶ್ರೀ ಮತ್ತು ಪೇಜಾವರದ ಮಾಜಿ ಕಿರಿಯ ಶ್ರೀಗಳಾದ ವಿಶ್ವವಿಜಯ ಸ್ವಾಮೀಜಿ ಸಂಶಯ ಹೊರಹಾಕಿದ್ದಾರೆ.
ಸಾಮಾಜಿಕ ತಾಣದಲ್ಲಿಯೂ ಶ್ರೀಗಳ ಸಾವು ಅಸಹಜ ಎಂದು ಹಲವಾರು ಭಕ್ತರು ಆರೋಪ ಮಾಡುತ್ತಿದ್ದಾರೆ. ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಜಿ ನಿಧನದ ಹಿಂದೆ ವಿಷಪ್ರಾಶನ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.  ಮಣಿಪಾಲದ‌ ಕಸ್ತೂರ ಬಾ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ ರಕ್ತ ವಾಂತಿ ಮಾಡಿಕೊಂಡಿದ್ದರು.

ಈ ಬಗ್ಗೆ ಪೇಜಾವರ ಮಠದ ಮಾಜಿ ಕಿರಿಯ ಶ್ರೀ ಶಂಕೆ ವ್ಯಕ್ತಪಡಿಸಿದ್ದು ಶಿರೂರು ಶ್ರೀಗಳ ಸಾವಿನ ಕುರಿತು ಸಿಬಿಐ ಅಥವಾ ಸಿಐಡಿ ತನಿಖೆಯಾಗಬೇಕು.ಶ್ರೀಗಳ ಮರಣೋತ್ತರ ಪರೀಕ್ಷೆ ನಡೆಸಿದ್ರೆ ಸತ್ಯ ಹೊರಬರುತ್ತೆ ಎಂದು ಹೇಳಿದ್ದಾರೆ. ವನಮಹೋತ್ಸವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಅಲ್ಲಿಯೇ ಊಟ ಮಾಡಿದ್ದರು.

ಸ್ವಾಮೀಜಿ ದೇಹದಲ್ಲಿ ವಿಷಕಾರಿ ಅಂಶ ಇತ್ತು!
ಅಸ್ವಸ್ಥಗೊಂಡಿದ್ದ ಸ್ವಾಮೀಜಿ ರಕ್ತ ವಾಂತಿ ಮಾಡಿಕೊಂಡಿದ್ದಾರೆ. ಶ್ರೀಗಳ ಸಾವಿನ ವಿವರ ನೀಡಿದ ಮಣಿಪಾಲ್ ಆಸ್ಪತ್ರೆ ವೈದ್ಯರು ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ನಮ್ಮ ಆಸ್ಪತ್ರೆಗೆ ಸೇರಿಸುವಾಗಲೇ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು ಎಂದು ಹೇಳಿದ್ದಾರೆ.

error: Content is protected !!