Thursday, August 16 , 2018 7:46 PMಬಿಎ ಮೊಹಿದ್ದೀನ್ ಆತ್ಮಕಥನ ‘ನನ್ನೊಳಗಿನ ನಾನು’ ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆ257

ಮಂಗಳೂರು: ಇತ್ತೀಚೆಗೆ ನಿಧರಾದ ಮಾಜಿ ಉನ್ನತ ಶಿಕ್ಷಣ ಸಚಿವ ಬಿ ಎ ಮೊಹಿದ್ದೀನ್ ಅವರ ಆತ್ಮಕಥನ ‘ನನ್ನೊಳಗಿನ ನಾನು ‘ ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ. ನಗರದ ಪುರಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಬಿ ಎ ಮೊಹಿದ್ದೀನ್ ಅವರ ಆತ್ಮಕಥನವನ್ನು ಹಿರಿಯ ಸಾಹಿತಿ ಡಾ.ಬಿ ಎ ವಿವೇಕ್ ರೈ ಬಿಡುಗಡೆ ಗೊಳಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಿಎ ಮೊಹಿದ್ದೀನ್ ಅವರ ಆತ್ಮೀಯ ಒಡನಾಡಿಯಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾಧ್ಯಕ್ಷ ಕೆ ಆರ್ ರಮೇಶ ಕುಮಾರ್ , ಮಾಜಿ ಸಚಿವ ಎಂ ಸಿ ನಾಣಯ್ಯ, ಸಚಿವರಾದ ಯು.ಟಿ ಖಾದರ್, ಝಮೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯರುಗಳಾದ ಬಿ ಎಂ ಫಾರೂಕ್ , ಐವನ್ ಡಿಸೋಜಾ ಮತ್ತಿತರು ಭಾಗವಹಿಸಲಿದ್ದಾರೆ. ಬಿ ಎ ಮೊಹಿದ್ದೀನ್ ಅವರ 232 ಪುಟಗಳ ಆತ್ಮಕಥನ ಕೃತಿಗೆ 200 ರೂಪಾಯಿ ನಿಗದಿಪಡಿಸಲಾಗಿದ್ದು, ನಾಳೆ ಬಿಡುಗಡೆಯ ಸಂದರ್ಭದಲ್ಲಿ 200 ರೂಪಾಯಿಗೆ ಲಭಿಸಲಿದೆ. ರಾಜ್ಯದ ಎಲ್ಲಾ ವಿಶ್ವವಿಧ್ಯಾನಿಲಯ ಮತ್ತು ಶಾಲಾ ಕಾಲೇಜುಗಳಿಗೆ, ಗ್ರಂಥಾಲಯಗಳಿಗೆ ಈ ಕೃತಿಯನ್ನು ನೀಡಲು ತೀರ್ಮಾನಿಸಲಾಗಿದೆ. ಹಾಲಿ ಮತ್ತು ಮಾಜಿ ಶಾಸಕರು, ಸಂಸದರು , ಬಿಎ ಮೊಹಿದ್ದೀನ್ ಅವರ ರಾಜಕೀಯ ಒಡನಾಡಿಗಳಿಗೆ ಕೃತಿಯನ್ನು ತಲುಪಿಸಲಾಗುವುದೆಂದು ಬಿಎ ಮೊಹಿದ್ದೀನ್ ಅವರ ಆತ್ಮಕಥನದ ನಿರೂಪಕ ಬಿ ಎ ಮುಹಮ್ಮದ್ ಅಲಿ ತಿಳಿಸಿದ್ದಾರೆ.

error: Content is protected !!