Sunday, July 15 , 2018 2:41 AM











ದಿವಾಕರ ಪದ್ಮುಂಜರ ಸಾಧನೆಗೆ ರಾಜ್ಯ ಮಟ್ಟದ ಬೆಸ್ಟ್ ವಿಡಿಯೋ ಜರ್ನಲಿಸ್ಟ್ ಪ್ರಶಸ್ತಿ



354

Posted By: Ranjith Madanthyar

ಮಂಗಳೂರು : ನಗರದಲ್ಲಿ ಕಳೆದ ಅನೇಕ ಸಮಯಗಳಿಂದ ವಿಡಿಯೋ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ದಿವಾಕರ ಪದ್ಮುಂಜ ಅವರಿಗೆ ಇದೀಗ ದಿ ನ್ಯೂ ಇಂಡಿಯನ್ ಟೈಮ್ಸ್ ಮಿಡಿಯಾ, ಬೆಸ್ಟ್ ಕ್ಯಾಮರಾಮೆನ್ ಪ್ರಶಸ್ತಿ ನೀಡಿ ಗೌರವಿಸಿದೆ. ದಿವಾಕರ್ ಪದ್ಮುಂಜ ಮೂಲತಃ ಬೆಳ್ತಂಗಡಿ ತಾಲ್ಲೂಕಿನ ಪದ್ಮುಂಜದ ನಿವಾಸಿಯಾದ ಇವರು ಕಳೆದ ಅನೇಕ ವರ್ಷಗಳಿಂದ ಜಿಲ್ಲಾ ವಿಡಿಯೋ ಜರ್ನಲಿಸ್ಟ್ ಆಗಿ ನಗರದಲ್ಲಿ ಕರ್ತವ್ಯ ಮಾಡುತ್ತಿದ್ದಾರೆ.

ದಿವಾಕರ ಪದ್ಮುಂಜ ಅವರದ್ದು, ಬಹುಮುಖ ಪ್ರತಿಭೆ ಅಂದರೂ ತಪ್ಪಾಗಲಾರದು, ದಿವಾಕರ್ ಕೇವಲ ವಿಡಿಯೋ ಜರ್ನಲಿಸ್ಟ್ ಮಾತ್ರವಲ್ಲ, ವೃತ್ತಿ ಬದುಕಿನ ಜೊತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು. ಒಬ್ಬ ಪರಿಸರ ಪ್ರೇಮಿ ಹಾಗೂ ಕಲಾವಿದನೂ ಹೌದು ತನ್ನ ಮಗನ ಹುಟ್ಟ ಹಬ್ಬವನ್ನು ಸಸಿಗಳನ್ನು ನೆಟ್ಟು ಹಾಗೂ ಈ ಹುಟ್ಟು ಹಬ್ಬ ಸಂಭ್ರಮದಲ್ಲಿ ಒಬ್ಬ ಯಕ್ಷಗಾನ ಕಲಾವಿದನಿಗೆ ಸನ್ಮಾನ ಮಾಡಿ ಬಹಳ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೇ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಪತ್ರಕರ್ತರ ಯಕ್ಷಗಾನದಲ್ಲಿ ಭಾಗವಹಿಸಿ, ಕೆಲ ಪಾತ್ರಗಳನ್ನು ಮಾಡಿ ನಾನು ಒಬ್ಬ ಕಲಾವಿದ ಎಂದು ತೋರಿಸಿದ್ದಾರೆ. ಇನ್ನೂ ಇವರ ವಿಡಿಯೋ ಜರ್ನಲಿಸ್ಟ್ ಬಗ್ಗೆ ಹೇಳಬೇಕಾದರೇ ಇವರು ಅನೇಕ ವಿಡಿಯೋ ಜರ್ನಲಿಸ್ಟ್‌ಗಳಿಗೆ ಗುರುಗಳು ಹೌದು ತನ್ನ ಜೊತೆಯಲ್ಲಿ ಕೆಲಸ ಮಾಡುವ ಅನೇಕ ಯುವಕರಿಗೆ ತನ್ನ ವಿದ್ಯೆಯನ್ನು ಧಾರೆಯೆರೆದವರು. ಪ್ರಸ್ತುತ ದಿಗ್ವೀಜಯ ನ್ಯೂಸ್ ಚಾನೆಲ್ನ ಮಂಗಳೂರು ಜಿಲ್ಲಾ ವಿಡಿಯೋ ಜರ್ನಲಿಸ್ಟ್ ಆಗಿರುವ ಇವರು, ಈ ಹಿಂದೆ ಅನೇಕ ರಾಜ್ಯ ಮಟ್ಟದ ಬೇರೆ ಬೇರೆ ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ದಿವಾಕರ ಪದ್ಮುಂಜ ಅವರ ಸಾಧನೆಗೆ ಇನ್ನಷ್ಟು ಪ್ರಶಸ್ತಿಗಳು ಒಳಿದು ಬರಲಿ ಎಂದು ಶುಭ ಹಾರೈಕೆ.

error: Content is protected !!