Thursday, August 16 , 2018 7:46 PM











ಶೀರೂರು ಶ್ರೀಗಳ ಮನೆಯಲ್ಲಿ ತಂಗುತ್ತಿದ್ದ ಆ ಮಹಿಳೆ ಯಾರು ಗೊತ್ತಾ?



8794

ಉಡುಪಿ : ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಮಾಡಿರುವ ಉಡುಪಿಯ ಶೀರೂರು ಮಠದ ಶ್ರೀಗಳಾದ ಲಕ್ಷ್ಮೀವರ ತೀರ್ಥ ನಿಗೂಢ ಸಾವು ದಿನದಿಂದ ದಿನಕ್ಕೆ ಹೊಸಹೊಸ ರಹಸ್ಯಗಳನ್ನು ಬಯಲಿಗೆಳೆಯುತ್ತ ರೋಚಕವಾಗುತ್ತಿದೆ.

ಶ್ರೀಗಳ ಸಾವಿನ ಹಿಂದೆ ಇಬ್ಬರು ಮಹಿಳೆಯರ ಕೈವಾಡವಿದೆ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಪತ್ರಿಕಾಗೋಷ್ಠಿಯಲ್ಲಿಯೇ ಹೇಳಿ ದಂಗು ಬಡಿಸಿದ್ದರು. ಇದೀಗ ಅದಕ್ಕೆ ಪುರಾವೆ ಎಂಬಂತೆ ಬ್ರಹ್ಮಾವರದ ರಮ್ಯಾ ಶೆಟ್ಟಿ ಎಂಬ ಮಹಿಳೆಯನ್ನು ಪೊಲೀಸರು ವಿಚಾರಣೆಗೆಂದು ವಶಕ್ಕೆ ತೆಗೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೂಲಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಮತ್ತುಪ್ರತೀ ಸೋಮವಾರ ಕೆಲಸಗಾರರಿಗೆ ಸಂಬಳ ವಿತರಿಸುತ್ತಿದ್ದರು. ಸೋಮವಾರ ಕೂಡ ಅವರು ಮಠಕ್ಕೆ ಬಂದಿರುವುದು ಸಿಸಿಟಿವಿಗಳಲ್ಲಿ ದಾಖಲಾಗಿದೆ.ಪೋಲೀಸರು ಪ್ರಾಥಮಿಕ‌ ತನಿಖೆ‌ ನಡೆಸುತ್ತಿದ್ದಾರೆ.

 ಎಲ್ಲಕ್ಕಿಂತ ಕುತೂಹಲಕಾರಿಯಾದ ಸಂಗತಿಯೆಂದರೆ, ಶೀರೂರು ಸ್ವಾಮೀಜಿ ತೊಡುತ್ತಿದ್ದ ಕಡಗ ಮಹಿಳೆ ಕೈಯ್ಯಲ್ಲಿ ಇರುವುದು ಮತ್ತುಶ್ರೀ ತೊಡುತ್ತಿದ್ದ ಚಿನ್ನಾಭರಣಗಳನ್ನು ಮಹಿಳೆ ತೊಟ್ಟು ಫೋಟೋ ಶೂಟ್ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದಿನ ಹುನ್ನಾರವೇನು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ
error: Content is protected !!