Sunday, September 23 , 2018 11:31 PM











ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿ ವರ್ಷವೂ ಕನಿಷ್ಠ ನೂರಾರು ಆತ್ಮಹತ್ಯೆಗಳು, ಕೊಲೆಗಳು.! : ವಿಶೇಷ ಪೊಲೀಸ್ ದಳ ನೇಮಕಕ್ಕೆ ಆಗ್ರಹ.!



1210

ಬೆಂಗಳೂರು : ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿ ವರ್ಷವೂ ಕನಿಷ್ಠ ನೂರಾರು ಆತ್ಮಹತ್ಯೆಗಳು ಹಾಗೂ ಕೊಲೆಗಳು ನಡೆಯುತ್ತಿರುವುದು ಸಮಿತಿಯ ಗಮನಕ್ಕೆ ಬಂದಿದೆ. ಬಹುತೇಕ ಪ್ರಕರಣಗಳು ಮಹಿಳೆಯರ ಆತ್ಮಹತ್ಯೆಗಳು ಹಾಗೂ ಕೊಲೆಗಳು ಎಂದು ಸಂಬಂಧಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಮಿತಿಯ ಗಮನಕ್ಕೆ ತಂದಿದ್ದಾರೆ. ಇಂತಹ ಅಕಾಲಿಕ ಸಾವುಗಳನ್ನು ತಡೆಯಲು ಜನ ಜಾಗೃತಿ ಮೂಡಿಸಬೇಕು. ವಿಶೇಷ ಪೊಲೀಸ್ ದಳವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರ ನೇಮಕ ಮಾಡಬೇಕು. ಮನೆಗೆಲಸದ ಮಹಿಳೆಯರು ಕಾರ್ಮಿಕ ಇಲಾಖೆಯಡಿಯಲ್ಲಿ ನೋಂದಣಿ ಕಡ್ಡಾಯವಾಗುವಂತೆ ಕ್ರಮ ಕೈಗೊಳ್ಳಬೇಕು. ಹೀಗೆ ಸುಮಾರು ೧೩೫ ಶಿಫಾರಸುಗಳನ್ನು ಅಂತಿಮ ವರದಿಯಲ್ಲಿ ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ೫೦೮೯ ಪುಟಗಳ ಅಂತಿಮ ವರದಿಯನ್ನು ಸಲ್ಲಿಸಿ, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಎಸ್.ಉಗ್ರಪ್ಪ, ರಾಜ್ಯಾದ್ಯಂತ ಪ್ರವಾಸ ಮಾಡಿ, ಸುಮಾರು ೧೩೫ಕ್ಕೂ ಹೆಚ್ಚು ಸಭೆಗಳನ್ನು ಸಮಿತಿ ನಡೆಸಿದೆ. ೨೦೧೫ರ ಡಿಸೆಂಬರ್ ೩೦ರಂದು ಸಮಿತಿ ಪ್ರಾಥಮಿಕ ವರದಿಯಲ್ಲಿ ೧೭ ಅಂಶಗಳ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಅಂತಿಮ ವರದಿ ನೀಡಿದ್ದು, ೧೩೫ ಶಿಫಾರಸುಗಳನ್ನು ಮಾಡಲಾಗಿದೆ ಎಂದರು. ಮಾತ್ರವಲ್ಲದೇ ಅತ್ಯಾಚಾರಿಯ ಮತದಾನದ ಹಕ್ಕು ಶಾಶ್ವತವಾಗಿ ರದ್ದಾಗಬೇಕು. ಆತನ ಹೆಸರಿನಲ್ಲಿರುವ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ನೀಡುವಂತಾಗಲು ಕಾನೂನು ರೂಪಿಸುವುದು ಸೇರಿದಂತೆ ಅತ್ಯಾಚಾರದಂತಹ ಅಪರಾಧವನ್ನು ಎಸಗಿ ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗುವವರ ಮೇಲೆ ಮತ್ತಷ್ಟು ಉಗ್ರ ಕ್ರಮಗಳನ್ನು ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.

error: Content is protected !!