Thursday, August 16 , 2018 7:46 PMಮಂಗಳೂರು: ಗಾಂಜಾ ಮಾರಾಟ ಪ್ರಕರಣ ನಾಲ್ವರ ಬಂಧನ1192

ಮಂಗಳೂರು : ಮಾದಕ ವಸ್ತು ಗಾಂಜಾವನ್ನು ಮಂಗಳೂರು ನಗರದಿಂದ ಬುಡ ಸಮೇತ ಕಿತ್ತೆಸೆಯಲು ಮಂಗಳೂರು ಪೊಲೀಸರು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ದಾಳಿಗಳನ್ನು ಈಗಾಗಲೇ ಮಾಡಿದ್ದಾರೆ.

ನಗರಕ್ಕೆ ಗಾಂಜಾ ಸರಬರಾಜು ಆಗುವ ಕೇರಳದ ಕಳ್ಳ ದಾರಿಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಹಲವಾರು ಗಾಂಜಾ ಸ್ಮಗ್ಲರ್ ಗಳನ್ನು ಬಂಧಿಸಿದ್ದಾರೆ. ಆದರೆ ನಗರದಲ್ಲಿ ಮಾತ್ರ ಗಾಂಜಾ ವ್ಯವಹಾರ ನಿಯತ್ರಣಕ್ಕೆ ಬರುತ್ತಿಲ್ಲ.

ನಗರದ ಉರ್ವಾ ಠಾಣೆಯ ಪೊಲೀಸರು ನಡಡೆಸಿದ ದಾಲಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂದಿತರನ್ನು ಅಶೋಕ ನಗರ ನಿವಾಸಿಗಳಾದ ನಿಶೀತ್ (22), ವೈಶಾಕ್(18), ಶಕ್ತಿ ನಗರ ನಿವಾಸಿ ಪ್ರೀತಂ (24), ಹಾಗು ಕದ್ರಿ ನಿವಾಸಿ ಸೂರಜ್ (33) ಎಂದು ಗುರುತಿಸಲಾಗಿದೆ. ನಗರದ ದೆಂಬೆಲ್ ಎಂಬಲ್ಲಿ ದಾಳಿ ನಡೆಸಿದ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ.

error: Content is protected !!