Sunday, September 23 , 2018 11:26 PMಲಕ್ಷ್ಮೀವರತೀರ್ಥ ಶ್ರೀಗಳ ಅಸಹಜ ಸಾವು ಪ್ರಕರಣ : ಶೀರೂರು ಮಠದ ಕೋಣೆಯಲ್ಲಿ ಸಿಕ್ಕಿದ್ದಾದ್ರೂ ಏನು?4265

ಉಡುಪಿ: ಶೀರೂರು ಮಠದ ಲಕ್ಷ್ಮೀವರ ತೀರ್ಥರ ಸಾವಿನ ತನಿಖೆಯು ಹೊಸ ತಿರುವು ಪಡೆಯುತ್ತಿದೆ. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸರ ಐದು ತಂಡಗಳನ್ನು ರಚಿಸಿದ್ದು, ಪ್ರತಿ ತಂಡಕ್ಕೆ ನಾನಾ ಜವಾಬ್ದಾರಿಗಳನ್ನು ನೀಡಲಾಗಿದೆ. ಶೀರೂರು ಶ್ರೀಗಳಿಗೆ ಒಡನಾಡಿಗಳಾಗಿ ಇದ್ದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ತನಿಖೆಯು ವೇಗ ಪಡೆದುಕೊಂಡು, ವಿವಿಧ ಆಯಾಮಗಳಲ್ಲಿ ಸಾಗುತ್ತಿದೆ.

ತನಿಖಾಧಿಕಾರಿ ಬೆಳ್ಳಿಯಪ್ಪ ಅವರ ಜತೆ ಮಾತುಕತೆ ನಡೆಸಿದ ಐಜಿ, ಶೀರೂರು ಶ್ರೀಗಳ ಸಾವಿನ ವಿಚಾರದ ತನಿಖೆ ಹಾದಿಯಲ್ಲಿ ಸಿಕ್ಕ ಪ್ರಮುಖ ಮಾಹಿತಿಗಳನ್ನು ಹೊರಹಾಕಿದ್ದಾರೆ.  ತನಿಖಾ ತಂಡವು ಶೀರೂರು ಮೂಲ ಮಠಕ್ಕೆ ತೆರಳಿ, ಅಲ್ಲಿ ಕೆಲಸ ಮಾಡುವವರ ಜತೆಗೂಡಿ ಶೋಧ ಕಾರ್ಯಾಚರಣೆ ನಡೆಸಿದೆ. ಆಗ ಮಠದಲ್ಲಿ ಮದ್ಯ ತುಂಬಿದ ರಾಶಿರಾಶಿ ಬಾಟಲುಗಳು ಸಿಕ್ಕಿವೆ?!.

ಇನ್ನೂ ಕುತೂಹಲಕಾರಿ ವಿಚಾರ ಅಂದರೆ, ಮಠದಲ್ಲಿ ಕಾಂಡೋಮ್, ಸ್ಯಾನಿಟರಿ ಪ್ಯಾಡ್ ಗಳು ಕೂಡ ದೊರೆತಿವೆ?!. ಅಂದ ಹಾಗೆ ಇವೆಲ್ಲ ದೊರೆತಿರುವುದು ಶೀರೂರು ಮಠದ ಕೋಣೆಯಲ್ಲಿ?!. ಅಲ್ಲಿಗೆ ಲಕ್ಷ್ಮೀವರ ತೀರ್ಥರನ್ನು ಬಿಟ್ಟು ಬೇರೆ ಯಾರೂ ಹೋಗುತ್ತಿರಲಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹಾಗಾಗಿ ನಾನಾ ಬಗೆಯ ಚರ್ಚೆಗೆ ಈ ಅಂಶವು ಕಾರಣವಾಗಿದೆ.

error: Content is protected !!