Sunday, July 15 , 2018 2:39 AM











ವಿದ್ಯಾರ್ಥಿನಿಯ ಜತೆ ಅಸಭ್ಯ ವರ್ತನೆ: ಡಿ.ಜೆ ಸುಕೇಶ್ ಪೋಕ್ಸೊ ಕಾಯ್ದೆಯಡಿ ಬಂಧನ



1326
ಮಂಗಳೂರು: ವಿದ್ಯಾರ್ಥಿನಿಯ ಜತೆ ಅಸಭ್ಯವಾಗಿ ವರ್ತನೆ ನಡೆಸಿದ ಆರೋಪದ ಮೇಲೆ ಯುವಕನೊಬ್ಬನನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಲಶೇಖರ ಶಕ್ತಿನಗರದ ನಿವಾಸಿ ಸುಕೇಶ್ ಬಂಧಿತ ಯುವಕ. ಈತ ಡಿಜೆ ಆಪರೇಟರ್ ಕೆಲಸ ಮಾಡುತ್ತಿದ್ದು, ಈತ ವಿದ್ಯಾರ್ಥಿನಿಯನ್ನು ಮಾತನಾಡಲು ಎಂದು ಕರೆದಿದ್ದ. ಆಕೆ ಬರಲೊಪ್ಪದಾಗ ಕೈ ಹಿಡಿದು ಎಳೆದು ಅಸಭ್ಯವಾಗಿ ವರ್ತಿಸಿದ್ದಾನೆ. ಯುವಕನ ವರ್ತನೆಯಿಂದ ಆಘಾತಗೊಂಡು ವಿದ್ಯಾರ್ಥಿನಿ ದೂರು ನೀಡಿದ್ದು, ಕದ್ರಿ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯ  ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
error: Content is protected !!