Sunday, September 23 , 2018 3:11 AM











ಕರಾವಳಿಯ ಅಕ್ರಮ ಮರಳು ಮಾಫಿಯಾಕ್ಕೆ ಬಲಿಯಾಗಿದ್ದ ಮೂಲರಪಟ್ಣದ ಸೇತುವೆ! : ಭಾರೀ ಮಳೆಗೆ ಕುಸಿತ!



1842

ಮಂಗಳೂರು: ಕಳೆದ ಅನೇಕ ಸಮಯದಿಂದ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯಿಂದಾಗಿ ಮೂಲರಪಟ್ಣದ ಸೇತುವೆ ಪಿಲ್ಲರ್ ಕುಸಿದಿದ್ದ ಕಾರಣ ಕೆಲದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇದೀಗ ಸೇತುವೆ ಕುಸಿದಿದೆ. ಹೌದು ಕಳೆದ ಅನೇಕ ಸಮಯಗಳಿಂದ ಇದೇ ಮೂಲರಪಟ್ಣದ ಸೇತುವೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿತ್ತು. ಆದರೆ ಸೇತುವೆಗಳು ಇರುವ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ಇಲ್ಲದಿದ್ದರು, ಮುಲ್ಲರಪಟ್ಟಣದಲ್ಲಿ ಮಾತ್ರ ಅಕ್ರಮ ಮರಳುಗಾರಿಕೆಗೆ ಎಗ್ಗಿಲ್ಲದೇ ನಡೆಯುತ್ತಿತ್ತು ಹಾಗೂ ಅಧಿಕಾರಿಗಳು ಈ ಮಾಫಿಯಾಕ್ಕೆ ಕಡಿವಾಣವೇ ಹಾಕಿರಲಿಲ್ಲ ಎಂದು ಜನ ಆರೋಪಿಸಿದ್ದಾರೆ.

ಇದೀಗ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮೂಲರಪಟ್ಣದ ಸೇತುವೆ ಕುಸಿದಿದೆ. ಬಿ.ಸಿ. ರೋಡ್ ಮತ್ತು ಕುಪ್ಪೆಪದವು ಸಂಪರ್ಕಿಸುವ ರಸ್ತೆಯ ನಡುವೆ ಫಲ್ಗುಣಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲಾಗಿತ್ತು. ಕುಪ್ಪೆಪದವು-ಬಿ.ಸಿ.ರೋಡ್ ಸಂಪರ್ಕಿಸುವ ಈ ಸೇತುವೆಯ ಮೂಲಕ ದಿನನಿತ್ಯ ಹಲವು ವಾಹನಗಳು ಸಂಚರಿಸುತ್ತಿದ್ದವು. ಸ್ಥಳಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!