Sunday, July 15 , 2018 2:19 AMಗಾಂಜಾ ಸೇವನೆ : ಮೂವರು ಆರೋಪಿಗಳ ಬಂಧನ261

ಮಂಗಳೂರು : ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಶಾಲೆಯ ಸಮೀಪದ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಶಾಂತ್ (27), ದೀಲಿಪ್ ಕುಮಾರ್ (21), ರಂಜಿತ್ ಯಾನೆ ತಮ್ಮು (30) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಚರಣೆಯಲ್ಲಿ ನಗರದ ಕೇಂದ್ರ ರೌಡಿ ನಿಗ್ರಹದಳದ ಪೊಲೀಸರು ಮತ್ತು ಉರ್ವ ಠಾಣಾ ಪೊಲೀಸರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

error: Content is protected !!