Sunday, September 23 , 2018 4:25 AM











ಪ್ರಧಾನಿ ಮೋದಿಯವರಿಗೆ ಜೀವಬೆದರಿಕೆ; ಮುಂಜಾಗ್ರತೆಗಾಗಿ ಹೊಸ ನಿಯಮ ಜಾರಿಗೊಳಿಸಿದ ಗೃಹ ಸಚಿವಾಲಯ



306

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವಬೆದರಿಕೆ ಇರುವುದು ಸತ್ಯವಾದ ವಿಷಯ. ಈ ಕಾರಣಕ್ಕೆ ಅವರಿಗೆ ವಿಶೇಷ ಸೆಕ್ಯೂರಿಟಿ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಗೃಹಸಚಿವಾಲಯ ಅವರ ರಕ್ಷಣೆಯ ದೃಷ್ಟಿಯಿಂದ ಹೊಸ ನಿಯಮವೊಂದನ್ನು ಜಾರಿಮಾಡಿದೆ. ಈ ನಿಯಮದ ಪ್ರಕಾರ ಪ್ರಧಾನಿಯವರ ಸಮೀಪ ಸಾಮಾನ್ಯರು ಯಾರೂ ಬರುವಂತಿಲ್ಲ. ಅಷ್ಟೇ ಏಕೆ ಸಚಿವರು, ಅಧಿಕಾರಿಗಳು ಕೂಡ ಮೋದಿಯವರ ವಿಶೇಷ ರಕ್ಷಣಾ ತಂಡ ತಪಾಸಣೆ ನಡೆಸಿ ಒಪ್ಪಿಗೆ ನೀಡಿದ ನಂತರವೇ ಅವರನ್ನು ಭೇಟಿ ಮಾಡಬೇಕು. ಈ ಬಗ್ಗೆ ಎಲ್ಲ ರಾಜ್ಯಗಳಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಲವು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲು ಕಾರಣವಾದ ಹಾಗೂ ಮುಂದಿನ ಲೋಕಸಭಾ ಚುನಾವಣೆಯ ಕೇಂದ್ರಬಿಂದು ಆಗಿರುವ ಪ್ರಧಾನಿ ಮೋದಿಯವರಿಗೆ ಇರುವ ಬೆದರಿಕೆ ಬಗ್ಗೆ ಈಗಾಗಲೇ ಎಲ್ಲ ರಾಜ್ಯಗಳಿಗೂ ಲಿಖಿತವಾಗಿ ಸಂದೇಶ ಕಳಿಸಲಾಗಿದೆ. ಯಾರೇ ಆಗಿರಲಿ ಪ್ರಧಾನಿ ನಿಕಟ ಸಂಪರ್ಕಕ್ಕೆ ಹೋಗುವಂತಿಲ್ಲ. ಈ ಆದೇಶ ಪಾಲನೆಯಾಗಲೇ ಬೇಕು ಎಂದು ಖಡಕ್​ ಎಚ್ಚರಿಕೆ ನೀಡಲಾಗಿದೆ. ಹಾಗೇ ಮೋದಿಯವರಿಗೂ ರೋಡ್​ ಶೋ ನಡೆಸದೆ ಇರಲು ಸಲಹೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮೋದಿಯವರು ಚತ್ತೀಸ್​ಗಡ್​, ಝಾರ್ಕಂಡ್​, ಮಧ್ಯಪ್ರದೇಶ, ಓಡಿಶಾ, ಪಶ್ಚಿಮಬಂಗಾಳ, ಪಂಜಾಬ್​ ಪ್ರವಾಸ ಮಾಡಲಿದ್ದು ಇದಕ್ಕಾಗಿ ಬಿಗಿಭದ್ರತೆ ನೀಡಲು ಸಿದ್ಧತೆ ನಡೆಸಲಾಗಿದೆ.

error: Content is protected !!