Sunday, September 23 , 2018 11:09 PMಕರ್ನಾಟಕದಲ್ಲಿ ನಮ್ ಟೀಂ ಇದೆ, ನಾವು ಅಲರ್ಟ್ ಆಗಿದ್ದೇವೆ, ಯು ಡೋಂಟ್ ವರಿ ಯಡಿಯೂರಪ್ಪ ಜೀ: ಅಮಿತ್ ಶಾ442

ಬೆಂಗಳೂರು: ಕರ್ನಾಟಕದ ಬಗ್ಗೆ ನಾವು ಆಲರ್ಟ್ ಆಗಿದ್ದೇವೆ. ಯು ಡೋಂಟ್ ವರಿ ಯಡಿಯೂರಪ್ಪ ಜೀ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಸೋಮವಾರ ಬಿಎಸ್‍ವೈ ಧಿಡೀರ್ ಅಂತ ಅಹಮದಾಬಾದ್ ಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಶಾ ಜೊತೆ ವಿಸ್ತ್ರತ ಚರ್ಚೆ ಮಾಡಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬಿದ್ದು ಹೋಗುತ್ತೆ. ಇನ್ನು ಲೋಕಸಭೆ ಚುನಾವಣೆ ಒಳಗೆ ಮೈತ್ರಿ ಸರ್ಕಾರ ಅದಾಗೆ ಪತನವಾಗುತ್ತದೆ ಎಂದು ಹೇಳಿದ್ದಾರೆ ಅಂತ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಮೈತ್ರಿ ಸರ್ಕಾರದ ಪ್ರತಿಯೊಂದು ಬೆಳವಣಿಗೆಯನ್ನು ನಮ್ಮ ಗುಪ್ತ ತಂಡ ಗಮನಹರಿಸಿದೆ. ಈಗಾಗಲೇ ನಮ್ ಟೀಂ ಕರ್ನಾಟಕದಲ್ಲಿ ಇದೆ. ಮುಂದೆಯೂ ಇರುತ್ತೆ. ಗುಪ್ತ ತಂಡದ ವರದಿ ಆಧಾರದ ಮೇಲೆ ಏನು ಕಾರ್ಯಾಚರಣೆ ಕೈಗೊಳ್ಳಬೇಕೆಂದು ನಾವೇ ನಿಮಗೆ ತಿಳಿಸುತ್ತೇವೆ. ಸೂಕ್ತ ಸಮಯದಲ್ಲಿ ರಾಜ್ಯ ಬಿಜೆಪಿ ಘಟಕಕ್ಕೆ ನಾವೇ ಮಾಹಿತಿ ನೀಡುತ್ತೇವೆ. ಸದ್ಯ ನೀವು ಮೈತ್ರಿ ಸರ್ಕಾರದ ವಿರುದ್ಧ ಹೋರಾಟದ ಕಡೆ ಗಮನ ಕೊಡಿ ಎಂದು ಅಹಮದಾಬಾದ್‍ನಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಅಮಿತ್ ಶಾ ಅಭಯ ನೀಡಿದ್ದಾರೆ. ಸುದೀರ್ಘ ಚರ್ಚೆ ಬಳಿಕ ಅಮಿತ್ ಶಾಗೆ ಜೂನ್ 29 ರ ರಾಜ್ಯ ಕಾರ್ಯಕಾರಿಣಿಗೆ ಬಿಎಸ್‍ವೈ ಆಹ್ವಾನ ನೀಡಿದ್ದಾರೆ. ಬಳಿಕ ಸಮಯ ನೋಡಿಕೊಂಡು ಬೆಂಗಳೂರಿನ ಕಾರ್ಯಕಾರಿಣಿ ಸಭೆಗೆ ಬರುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಬಜೆಟ್ ಮಂಡನೆಗೂ ಮೊದಲು ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಾರಾ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಮೂಡಿದೆ.

error: Content is protected !!